ಕುಲವಳ್ಳಿಯಲ್ಲಿ ಕೊಲೆ : ಆರೋಪಿಗಳು ಪರಾರಿ - click...
‘ರಜತ ಉತ್ಸವ' ಸ್ಮರಣೀಯವಾಗಿಸಲು ಸಲಹೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರಜತ ಮಹೋತ್ಸವ ಸಂಭ್ರಮದಲ್ಲಿರುವ ಅ. 23 ಮತ್ತು 24 ರಂದು ನಡೆಯಲಿರುವ ಐತಿಹಾಸಿಕ ಕಿತ್ತೂರು ಉತ್ಸವವನ್ನು ಈ ನಾಡಿನ ಜನರ ನೆನಪಿನಲ್ಲಿ ಉಳಿಯುವ ಹಾಗೆ ಆಚರಣೆ ಮಾಡಬೇಕು ಎಂದು ಪ್ರಚಾರ ಉಪಸಮಿತಿ ಮನವಿ ಮಾಡಿದೆ.
ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಉಪಸಮಿತಿ ಅಧ್ಯಕ್ಷ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಮನವಿ ಮಾಡಿಕೊಳ್ಳಲಾಯಿತು.
ಕಿತ್ತೂರು ಉತ್ಸವದ ನಿಮಿತ್ತ ವರ್ತುಲದಲ್ಲಿ ಇತಿಹಾಸ ಬಿಂಬಿಸುವ ಡಿಜಿಟಲ್ ಬೋರ್ಡ್ ಅನಾವರಣ ಮಾಡಬೇಕು. ಆಮಂತ್ರಣ ಪತ್ರಿಕೆಯಲ್ಲಿ ಸಂಕ್ಷಿಪ್ತ ವಿಜಯೋತ್ಸವ ಆಚರಣೆಯ ಹಿನ್ನೆಲೆ ಮುದ್ರಿಸಬೇಕು. ಆಮಂತ್ರಣ ಪತ್ರಿಕೆಯ ಪ್ರತಿ ಪುಟದ ಅಡಿಯಲ್ಲಿ ಸಂಸ್ಥಾನದ ಬಗೆಗಿನ ಮಾಹಿತಿ ಸಾಲುಗಳನ್ನು ಪ್ರಕಟಿಸಬೇಕು ಎಂಬ ಸಲಹೆ ಕೇಳಿ ಬಂದವು.
ಉತ್ಸವದ ಮುಖ್ಯ ವೇದಿಕೆಯಲ್ಲಿ ಗುಣಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರಖ್ಯಾತ ಕಲಾವಿದರು ಕಾರ್ಯಕ್ರಮ ನೀಡಲು ಆಗಮಿಸಿದರೆ ಇದೂ ಕೂಡಾ ಹೆಚ್ಚು ಪ್ರಚಾರ ಆಗುತ್ತದೆ. ವೇದಿಕೆಯ ಗಂಭೀರತೆಗೆ ತಕ್ಕ ಹಾಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸದಸ್ಯರು ತಿಳಿಸಿದರು.
25 ನೇ ಬೆಳ್ಳಿ ಹಬ್ಬದ ನೆನಪಿಗಾಗಿ ಇಲ್ಲಿ ಏನಾದರೊಂದು ದೊಡ್ಡ ಯೋಜನೆಗೆ ಶಿಲಾನ್ಯಾಸ ಹಾಕಿದ್ದರೂ ಅದು ದೊಡ್ಡ ಪ್ರಚಾರವಾಗುತ್ತಿತ್ತು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಪತ್ರಕರ್ತ ಪ್ರದೀಪ ಮೇಲಿನಮನಿ, ಈರಣ್ಣ ಬಣಜಗಿ, ಉಳವಯ್ಯ ಹಿರೇಮಠ, ಸೋಮಶೇಖರ ಕುಪ್ಪಸಗೌಡರ, ನಾಗರಾಜ ಜೋರಾಪುರ, ಕಲ್ಲಪ್ಪ ಅಗಸಿಮನಿ, ಶಿವಾನಂದ ವಿಭೂತಿಮಠ, ಸಂಜೀವಕುಮಾರ ತಿಲಗರ, ಚಂದ್ರಕಾಂತ ಹೈಬತ್ತಿ, ಪ್ರವೀಣ ಗಿರಿ, ರುದ್ರಪ್ಪ ಹುಬ್ಬಳ್ಳಿ, ಬಸವರಾಜ ಚಿನಗುಡಿ, ಉಮೇಶ ಗೌರಿ, ಪ್ರಾಣೇಶ ಕೊಡ್ಲಿ ಇದ್ದರು.
ವ್ಯಾಪಕ ಪ್ರಚಾರಕ್ಕೆ ಕ್ರಮ : ಕಡಬೂರ ಭರವಸೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ವೀರ ರಾಣಿ ಕಿತ್ತೂರು ಚನ್ನಮ್ಮನ ಇತಿಹಾಸವನ್ನು ಸಮೂಹ ಮಾಧ್ಯಮಗಳ ಮೂಲಕ ನಾಡಿನ ಎಲ್ಲ ಜನರಿಗೆ ಹಾಗೂ ಯುವ ಸಮೂಹಕ್ಕೆ ತಿಳಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರ ಕಾರ್ಯವನ್ನು ಕಿತ್ತೂರು ಉತ್ಸವದಲ್ಲಿ ಕೈಗೊಳ್ಳಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಹಾಗೂ ಕಿತ್ತೂರು ಉತ್ಸವ ಪ್ರಚಾರ ಉಪಸಮಿತಿ ಅಧ್ಯಕ್ಷ ಗುರುನಾಥ ಕಡಬೂರ ತಿಳಿಸಿದರು.
ಕಿತ್ತೂರು ಉತ್ಸವದ ಕುರಿತು ಎಲ್ಲ ಮಾಧ್ಯಮಗಳು ಈಗಾಗಲೇ ಸುದ್ದಿ, ವಿಶೇಷ ವರದಿಗಳು ಹಾಗೂ ಪ್ರಕಟಣೆಗಳ ಮೂಲಕ ಜನರಿಗೆ ಮಾಹಿತಿಯನ್ನು ನೀಡುತ್ತಿವೆ. ಸರ್ಕಾರ ಹಾಗೂ ಉತ್ಸವ ಸಮಿತಿಯ ಮೂಲಕ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಕುರಿತು ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
Post a Comment