ಅಂಚೆ ವಿಮಾಮೇಳಕ್ಕೆ ನಿಜಗುಣಾನಂದ ಸ್ವಾಮೀಜಿ ಚಾಲನೆ - Kittur


 ‘ಜೀವನ ಸಾರ್ಥಕತೆಗೆ ಬೇಕು ಆಧ್ಯಾತ್ಮಿಕ ಜ್ಞಾನ’ : ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ - click...

‘ವಿಶ್ವಾಸಾರ್ಹ ಸೇವೆಗೆ ಹೆಸರು ಅಂಚೆ ಇಲಾಖೆ’

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ‘ಪ್ರಾಮಾಣಿಕ ಮತ್ತು ವಿಶ್ವಾಸಾರ್ಹತೆಗೆ ಅಂಚೆ ಇಲಾಖೆ ಹೆಸರಾಗಿದ್ದು, ಹಳ್ಳಿಯಿಂದ ದಿಲ್ಲಿಯವರೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತ ಬಂದಿದೆ' ಎಂದು ಬೈಲೂರು  ನಿಷ್ಕಲ  ಮಂಟಪದ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ರಾಷ್ಟ್ರೀಯ ಅಂಚೆ ಸಪ್ತಾಯದ ಅಂಗವಾಗಿ ತಾಲೂಕಿನ ಬೈಲೂರು ಗ್ರಾಮದ ನಿಷ್ಕಲ ಮಂಟಪದ  ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ    ಮಂಗಳವಾರ ಏರ್ಪಡಿಸಲಾಗಿದ್ದ ‘ಗ್ರಾಮೀಣ ಅಂಚೆ ಜೀವವಿಮಾ ಮೇಳ'ದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಮಹಾತ್ಮರು ಮತ್ತು ಹೋರಾಟಗಾರರ ಅಂಚೆ ಚೀಟಿ ಬಿಡುಗಡೆ ಮಾಡಿ ಇಡೀ ರಾಷ್ಟ್ರಕ್ಕೆ ಅವರನ್ನು ಪರಿಚಯ ಮಾಡುವ ಮಹತ್ತರ ಕೆಲಸವನ್ನು ಇಲಾಖೆ ಮಾಡಿದೆ' ಎಂದೂ ಬಣ್ಣಿಸಿದರು.

‘ಕಷ್ಟ ಕಾಲದಲ್ಲಿ  ಗ್ರಾಹಕರಿಗೆ ಅನುಕೂಲವಾಗಲೆಂದು ಅಂಚೆ ಇಲಾಖೆಯೂ  ಜೀವವಿಮಾ ಪಾಲಿಸಿ ಪರಿಚಯಿಸಿದೆ. ಇದರ ಲಾಭ ಪಡೆದುಕೊಳ್ಳಬೇಕು' ಎಂದರು.

ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ಎಚ್. ಬಿ. ಹಸಬಿ ಮಾತನಾಡಿ, ‘ಇಲಾಖೆಯು ಹಲವು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದು ಬೈಲೂರ ಗ್ರಾಮವನ್ನು ಸಂಪೂರ್ಣ ವಿಮಾ ಗ್ರಾಮವನ್ನಾಗಿ ಅಯ್ಕೆ ಮಾಡಿದೆ'  ಎಂದರು. 

ಪೋಸ್ಟ್ ಮಾಸ್ಟರ್‍ಗಳಾದ ಬಿ. ಬಿ. ಹಿತ್ತಲಮನಿ, ಎಫ್. ಕೆ. ಮುಶನ್ನವರ ಮಾತನಾಡಿ,  ಅಂಚೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕಲ್ಲಪ್ಪ ಕಟಗಿ, ಆರ್. ಜಿ. ಮೊರಬದ, ಕೆ. ಎಸ್. ಕುರಗುಂದ, ನಿಂಗಪ್ಪ ಪತ್ರಿ, ವಿರುಪಾಕ್ಷಿ ಅಂಬವ್ವಗೊಳ, ಪಿಡಿಓ ಜಯರಾಮ ಕಾದ್ರೊಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು, ಕಿತ್ತೂರು ಹಾಗೂ ಇಟಗಿ ಅಂಚೆ ಉಪ ವಿಭಾಗದ ಸಿಬ್ಬಂದಿ ಇದ್ದರು.

ಬೈಲೂರು ಪೋಸ್ಟ್ ಮಾಸ್ಟರ್À ರವೀಂದ್ರ ಅಗ್ನಿಹೋತ್ರಿ ಸ್ವಾಗತಿಸಿದರು, ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು, ಶಿಕ್ಷಕ ಗಂಗಾಧರ ಹನುಮಸಾಗರ ವಂದಿಸಿದರು.

0/Post a Comment/Comments