ಗಾಂಧಿ ಜಯಂತಿ: ಬಿಜೆಪಿಯಿಂದ ವಿವಿಧ ಕಾರ್ಯಕ್ರಮ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸೇವಾ ಸಮರ್ಪಣಾ ಅಭಿಯಾನದಡಿ ಅ. 2 ರಂದು ಆಚರಿಸಲಾಗುವ ಗಾಂಧಿ ಜಯಂತಿ ಅಂಗವಾಗಿ ಕಿತ್ತೂರು ವಿಧಾನಸಭೆ ಕ್ಷೇತ್ರದಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಕಿತ್ತೂರು ಮುಖ್ಯ ಬಸ್ನಿಲ್ದಾಣದಲ್ಲಿ ಸ್ವಚ್ಛತೆ ಅಭಿಯಾನ ಹಾಗೂ ಮಂಡಳ ಪ್ರಮುಖರು ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ನೆರವೇರಿಸುವರು.
ಅನಂತರ ವಿಶ್ವ ಹಿಂದೂ ಪರಿಷತ್ ಕಿತ್ತೂರು ಘಟಕದ ಅಧ್ಯಕ್ಷ ಮಡಿವಾಳಪ್ಪ ದಾಸನಕೊಪ್ಪ ಅವರು, ವ್ಯಸನ ಮುಕ್ತ ಭಾರತ ಬಗ್ಗೆ ಉಪನ್ಯಾಸ ನೀಡುವರು.
ಕುಲ ಕಸುಬು ಮಾಡುತ್ತಿರುವ ಮೇದಾರ ಸಮಾಜದವರ ಗಣ್ಯರ ಸತ್ಕಾರ ಕಾರ್ಯಕ್ರಮ ಹಾಗೂ ಕಿತ್ತೂರ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ತೆರಳಿ ಖಾದಿ ಬಟ್ಟಿ ಖರೀದಿಯ ಮಹತ್ವ ತಿಳಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂದೀಪ ದೇಶಪಾಂಡೆ, ಮಹಾಶಕ್ತಿ ಕೇಂದ್ರದ ಪ್ರಮುಖ ಸುಭಾಸ ರಾವಳ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕ್ಷೇತ್ರದ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಲ್ಲ ಬಿಜೆಪಿ ಕಾರ್ಯಕರ್ತರು ಅ. 2 ರಂದು ಮುಂಜಾನೆ 8ಕ್ಕೆ ಕಿತ್ತೂರು ಮುಖ್ಯ ಬಸ್ನಿಲ್ದಾಣದಲ್ಲಿ ಹಾಜರಿರಬೇಕು ಎಂದು ಗಾಂಧಿ ಜಯಂತಿ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಕಿರಣ ವಾಳದ ಹಾಗೂ ಮಹಾದೇವ ಹತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.