ಗರ್ಭಿಣಿ ಬಾಣಂತಿಯರಿಗೆ ಸಮರ್ಪಕ ಆಹಾರಧಾನ್ಯ ತಲುಪಲಿ: ಶಾಸಕ ಮಹಾಂತೇಶ ಕೌಜಲಗಿ - Dodawad


 ಕಾರ್ಯಕಾರಿಣಿಯಿಂದ ಸಂಸದನನ್ನು ಹೊರಗಿಟ್ಟ ಬಿಜೆಪಿ  - click...

ಗರ್ಭಿಣಿ ಬಾಣಂತಿಯರಿಗೆ ಸಮರ್ಪಕ ಆಹಾರಧಾನ್ಯ ತಲುಪಲಿ
ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಉತ್ತಮ  ಆರೋಗ್ಯ ಪೋಷಣೆಗಾಗಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯವಾಗಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು.
ಸಮೀಪದ ಸಿದ್ದಸಮುದ್ರ ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ ರೂ. 17 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆಸ್ತಿಯಾಗಿರುವ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು  ಗುಣ- ಸಂಸ್ಕಾರಗಳನ್ನು ಕಲಿಸಬೇಕು ಎಂದೂ ಸಲಹೆ ನೀಡಿದರು. 
ಸಿಡಿಪಿಓ ರೇವತಿ ಹೊಸಮಠ ಮಾತನಾಡಿದರು. ಭಾಗ್ಯಲಕ್ಷ್ಮಿ ಬಾಂಡ್ ಬ್ಯಾಂಕ್ ಖಾತೆ  ಪುಸ್ತಕ ವಿತರಿಸಲಾಯಿತು.
ರಾಷ್ಟ್ರೀಯ  ಘೋಷಣೆ ಅಭಿಯಾನ ಕಾರ್ಯಕ್ರಮದಡಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಕೂಡಾ ಇದೇ ಸಂದರ್ಭದಲ್ಲಿ ನೆರವೇರಿಸಲಾಯಿತು. 
ಅಂಗನವಾಡಿ ಕಟ್ಟಡ ಕಟ್ಟಲು ಸ್ಥಳ ದೇಣಿಗೆ ನೀಡಿದ ಸಂಗಪ್ಪ ತಟ್ಟಿಮನಿ ಅವರನ್ನು ಗೌರವಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನಗುರು ಕೆ.ಯು. ಬೆಳಗಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಅಮೃತಾ ಕಕ್ಕಯ್ಯನವರ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸಿದ್ದಪ್ಪ ನಂದಿಹಳ್ಳಿ, ಸದಸ್ಯರು,  ಅಂಗನವಾಡಿ  ಹಾಗೂ  ಆಶಾ ಕಾರ್ಯಕರ್ತೆಯರು,  ಗ್ರಾಮಸ್ಥ

0/Post a Comment/Comments