ದೊಡವಾಡ: ಬಿತ್ತನೆ ಬೀಜ ವಿತರಣೆ - Dodawad

ಗರ್ಭಿಣಿ ಬಾಣಂತಿಯರಿಗೆ ಸಮರ್ಪಕ ಆಹಾರಧಾನ್ಯ ತಲುಪಲಿ: ಶಾಸಕ ಮಹಾಂತೇಶ ಕೌಜಲಗಿ - click...

 ದೊಡವಾಡ: ಕಡಲೆ, ಜೋಳದ ಬಿತ್ತನೆ ಬೀಜ ವಿತರಣೆ

ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಇಲ್ಲಿಯ ಪಿಕೆಪಿಎಸ್ ಕಾರ್ಯಾಲಯದಲ್ಲಿ ಹಿಂಗಾರು ಹಂಗಾಮಿಗಾಗಿ ರೈತರಿಗೆ ಕಡಲೆ ಮತ್ತು ಜೋಳದ ಬಿತ್ತನೆ ಬೀಜವನ್ನು ರಿಯಾಯತಿ ದರದಲ್ಲಿ ಗುರುವಾರ ವಿತರಿಸಲಾಯಿತು.  
ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಮಾತನಾಡಿ, ಸಾಮಾನ್ಯ ವರ್ಗದ ರೈತರಿಗೆ ಕಡಲೆ ಕಾಳಿನ ಪ್ಯಾಕೇಟ್‍ವೊಂದಕ್ಕೆ ರೂ. 1020 ಮತ್ತು ಪರಿಶಿಷ್ಟ ಜಾತಿ ಪಂಗಡ ವರ್ಗದವರಿಗೆ ರೂ. 770 ದರವನ್ನು ಸರ್ಕಾರ ನಿಗದಿ ಪಡಿಸಿದೆ.
ಜೋಳದ ಪಾಕೀಟು ಸಾಮಾನ್ಯ ವರ್ಗದವರಿಗೆ ರೂ. 90 ಹಾಗೂ ಪರಿಶಿಷ್ಟ ಜಾತಿ ಪಂಗಡ ವರ್ಗದವರಿಗೆ ರೂ. 69 ಇದೆ. ಒಬ್ಬ ರೈತರಿಗೆ ಗರಿಷ್ಠ 3 ಪಾಕೀಟು ಖರೀದಿ ಪಡೆಯಲು ಅವಕಾಶವಿದೆ ಎಂದು ಹೇಳಿದರು. 
ಉಪಾಧ್ಯಕ್ಷ ಉದಯ ಕೊಟಬಾಗಿ, ನಿರ್ದೇಶಕರಾದ ವಿಠ್ಠಲ ಗಾಬಿ, ಚನ್ನಯ್ಯ ದಾಬಿಮಠ, ಬಸವರಾಜ ಮುರಗೋಡ, ನಾಗಪ್ಪ ಸವದತ್ತಿ, ಲಕ್ಕಪ್ಪ ಅಲಕ್ಕನವರ, ಸೊಸೈಟಿ ಸಿಇಓ ಎಂ.ಎಸ್. ಶಿಂಧೆ, ಗ್ರಾಮ ಪಂಚಾಯ್ತಿ ಸದಸ್ಯ ಅಪ್ಪು ಅಸುಂಡಿ ರೈತರಾದ ಸೋಮಲಿಂಗ ಸಂಗೊಳ್ಳಿ, ಪರ್ವತಪ್ಪ ಸಂಗೊಳ್ಳಿ ಉಪಸ್ಥಿತರಿದ್ದರು.

0/Post a Comment/Comments