ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನ - Bengaluru

ಬಹುಮಾನದ ದುಡ್ಡು ಕೊಡದಷ್ಟು ಬಡವಾಯಿತೇ ಉತ್ಸವ ಸಮಿತಿ? - click...

ಕೇಂದ್ರ ಸಚಿವ ಪುತ್ರ ಆಶಿಶ್ ಮಿಶ್ರಾ ಬಂಧನ

ಪ್ರೆಸ್‍ಕ್ಲಬ್ ವಾರ್ತೆ

ಬೆಂಗಳೂರು: ರೈತರ ಮೇಲೆ ವಾಹನ ಹರಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಅ. 9 ರಂದು ತಡರಾತ್ರಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

‘ವಿಚಾರಣೆಯಲ್ಲಿ ಸಹಕರಿಸದ ಕಾರಣ ಆತನನ್ನು ಬಂಧಿಸಲಾಯಿತು’ ಎಂದು ಡಿಐಜಿ ಉಪೇಂದ್ರ ಅಗರ್‍ವಾಲ್ ದೃಢಪಡಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ  ಹಾಜರು ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅ. 3 ರಂದು 8 ಜೀವಗಳನ್ನು ಬಲಿ ತೆಗೆದುಕೊಂಡ ಪ್ರಕರಣದ ತನಿಖೆ ನಡೆಸುವಂತೆ ಅಗರವಾಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚನೆ ಮಾಡಲಾಗಿತ್ತು. ಅ. 8 ರಂದು ಪೊಲೀಸರ ಮುಂದೆ ಆತ ಹಾಜರಾಗಬೇಕಿತ್ತು. ಆದರೆ ಹಾಜರಾಗಿರಲಿಲ್ಲ. ಅ. 9 ರಂದು ಬೆಳಿಗ್ಗೆ 11 ಗಂಟೆಯೊಳಗೆ ಹಾಜರಾಗುವಂತೆ ಉತ್ತರ ಪ್ರದೇಶದ ಪೊಲೀಸ್‍ರು ಸೂಚನೆ ನೀಡಿದ್ದರು.

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ ಆರೋಪಕ್ಕೊಳಗಾಗಿರುವ ಆಶಿಶ್‍ನನ್ನು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಪೊಲೀಸ್ ವಿಚಾರಣೆ ವೇಳೆ ಆತ ಸಮರ್ಪಕ ಉತ್ತರವನ್ನೂ ನೀಡಲಿಲ್ಲ ಹಾಗೂ ಸಹಕಾರವನ್ನು ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಈತನ ತಂದೆ ಕೇಂದ್ರ ಸಚಿವರಾಗಿದ್ದರಿಂದ ಪುತ್ರನಿಗೆ ವಿಐಪಿ ಚಿಕಿತ್ಸೆ ನೀಡಲಾಗಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.

ಈ ಘಟನೆಯ ಕುರಿತು ರಾಷ್ಟ್ರಾದ್ಯಂತ ರೈತರ ಒಕ್ಕೂಟಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಯಾರೇ ಭಾಗಿಯಾಗಿದ್ದರೂ

ಕಾನೂನು ಕ್ರಮ ಜರುಗಿಸಬೇಕು ಎಂದು ಸುಪ್ರೀಂ ಕೋರ್ಟ್  ಹೇಳಿತ್ತು. ಬಂಧನ ವಿಳಂಬವಾಗಿದ್ದರಿಂದ ‘ನೀವು ಕಳುಹಿಸುತ್ತಿರುವ
ಸಂದೇಶವೇನು? ಸಾಮಾನ್ಯ ಪ್ರಕರಣಗಳಲ್ಲಿ ಪೊಲೀಸರು ಕೂಡಲೇ ಹೋಗಿ ಆರೋಪಿಗಳನ್ನು ಬಂಧಿಸುವುದಿಲ್ಲವೇ’ ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್ ‘ಪೊಲೀಸರ ಕೆಲಸಗಳು  ನಡೆದುಕೊಳ್ಳಬೇಕಾದ ರೀತಿ ನಡೆಯಲಿಲ್ಲ’ ಎಂದೂ ಅಸಮಾಧಾನ
ವ್ಯಕ್ತಪಡಿಸಿತ್ತು.

0/Post a Comment/Comments