ಕಾರ್ಯಕಾರಿಣಿಯಿಂದ ಸಂಸದನನ್ನು ಹೊರಗಿಟ್ಟ ಬಿಜೆಪಿ - Bengaluru




ಕಿತ್ತೂರಿನಲ್ಲಿ ದುರ್ಗಾಮಾತಾ ದೌಡ್ ಸಡಗರ - click...

ನನಗಿದು ಅನಿವಾರ್ಯ ಎಂದು ಭಾವಿಸುವುದಿಲ್ಲ: ತಿರುಗೇಟು
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಉತ್ತರ  ಪ್ರದೇಶದ  ಲಖಿಂಪುರ್ ಖೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಚಲಾಯಿಸಿ ಹತ್ಯೆ ಮಾಡಿದ ದುರ್ಘಟನೆ ಕುರಿತು ಟೀಕಿಸಿದ್ದ ಕೆಲವು ಗಂಟೆಗಳಲ್ಲಿಯೇ 41 ವರ್ಷ ವಯಸ್ಸಿನ ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ (ಓಇಅ)ಯಿಂದ ಹೊರಗಿಡಲಾಗಿದೆ ಎಂದು ವರದಿಯೊಂದು ತಿಳಿಸಿದೆ.
‘ಕಳೆದ 17 ವರ್ಷಗಳಿಂದ ನಾನು ಪಕ್ಷದ ಜೊತೆಗಿದ್ದೇನೆ. ಮತ್ತು ಕಳೆದ 5 ವರ್ಷಗಳಿಂದ ಒಂದೇ ಒಂದು ಸಭೆಗೂ ಹಾಜರಾಗಿಲ್ಲ. ನನಗೆ ಅದು ಅನಿವಾರ್ಯವೂ ಇದೆಯೆಂದು ನಾನು ಭಾವಿಸುವುದಿಲ್ಲ’ ಎಂದು ಬಿಜೆಪಿ ಕ್ರಮದ ವಿರುದ್ಧ ಅವರು ಸುದ್ದಿಸಂಸ್ಥೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 
ಲಖಿಂಪುರ್ ಖೇರಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಏಕೈಕ ಬಿಜೆಪಿ ನಾಯಕ ವರುಣ ಗಾಂಧಿ ಅವರಾಗಿದ್ದಾರೆ. ಬಿಜೆಪಿ ಕೇಂದ್ರ ಸಚಿವರ ಪುತ್ರನ ಮೇಲೆಯೇ ಕೊಲೆ ಆರೋಪ ಕೇಳಿಬಂದಿದೆ. ಅವರ ಪುತ್ರನನ್ನು ಇನ್ನೂವರೆಗೆ ಬಂಧಿಸಲಾಗಿಲ್ಲ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಸಿಬಿಐದಿಂದ ಈ ಪ್ರಕರಣದ ತನಿಖೆ ನಡೆಸಬೇಕು. ಘಟನೆಯಲ್ಲಿ ಸಾವನ್ನಪ್ಪಿದ ರೈತ ಕುಟುಂಬದ ವಾರಸುದಾರರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.
ಮುಗ್ದ ರೈತರ  ಅಂತರಾಳದಲ್ಲಿ ಮಡುಗಟ್ಟಿರುವ ಆಕ್ರೋಶ ಹೊರಗೆ ಬರುವ ಮುನ್ನ ಅವರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. 
 

0/Post a Comment/Comments