ಶ್ರೀಮಂತರ ನಿಗೂಢ ನಿಧಿ ಹೂಡಿಕೆ ಮಾಡಿದ್ದೆಲ್ಲಿ ? - Bengaluru

ಕಿತ್ತೂರು ಉತ್ಸವ ‘ಬೆಳ್ಳಿಹಬ್ಬ’ಕ್ಕೆ ಸರ್ಕಾರ ನಿರಾಸಕ್ತಿ - click...

ಶ್ರೀಮಂತರ ನಿಗೂಢ ನಿಧಿ ಹೂಡಿಕೆ ಬಹಿರಂಗ: ಜಾಗತಿಕ ಮಟ್ಟದಲ್ಲಿ ತಲ್ಲಣ!

ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಭಾರತದವರೂ ಸೇರಿ ವಿಶ್ವಾದ್ಯಂತ ಇರುವ ಶತಕೋಟ್ಯಾಧಿಪತಿಗಳ ‘ಸಾಗರದಾಚೆಯ  ವ್ಯವಹಾರ'ಗಳಲ್ಲಿ ರಹಸ್ಯ ನಿಧಿ ಹೂಡಿಕೆ ಮಾಡಿರುವ ‘ಪಂಡೋರಾ  ಪೇಪರ್ಸ್' ದಾಖಲೆಗಳು ಸೋರಿಕೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ರಾಜಕಾರಣಿಗಳು, ಸೆಲೆಬ್ರಿಟಿಗಳು,  ಸೂಪರ್ ಮಾಡೆಲ್‍ಗಳು, ಕ್ರೀಡಾಪಟುಗಳು ಹೂಡಿಕೆ ಮಾಡಿದ್ದಾರೆ ಎಂದು ಹೇಳುವ ವರದಿಗಳು ದೇಶ, ವಿದೇಶಗಳ   ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವರೆಲ್ಲ ಮುಜುಗರಕ್ಕೆ ಒಳಗಾಗುವ ಮತ್ತು ಸ್ಪಷ್ಟೀಕರಣ ನೀಡುವ ಮಟ್ಟಕ್ಕೆ ಈ ಸೋರಿಕೆ ತಂದು ನಿಲ್ಲಿಸಿದೆ. 
91 ರಾಷ್ಟ್ರಗಳ ಹಾಲಿ ಮತ್ತು ಮಾಜಿ ವಿಶ್ವನಾಯಕರು, ರಾಜಕಾರಣಿಗಳು, ಅಧಿಕಾರಿಗಳು ಸೇರಿ ವಿವಿಧ ರಂಗಗಳ ಹಣಕಾಸು ರಹಸ್ಯಗಳನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (International Consortium of Investigative Journalist) ಪತ್ತೆ ಮಾಡಿರುವುದಾಗಿ  ತನ್ನ ವರದಿಯಲ್ಲಿ ಹೇಳಿಕೊಂಡಿದೆ.
117 ದೇಶಗಳ 600 ಕ್ಕೂ ಹೆಚ್ಚು ಪತ್ರಕರ್ತರು ಹಲವಾರು ಶಕ್ತಿಶಾಲಿ ಜನರ ಗುಪ್ತ ನಿಧಿ ಹೂಡಿಕೆ ವಿವರಗಳನ್ನು ವೀಕ್ಷಣೆ ಮಾಡಿದ್ದಾರೆÉ ಎಂದು ಹೇಳಲಾಗುತ್ತಿದೆ.