ಮೋದಿ ಸರ್ವಾಧಿಕಾರಿಯೇ? ಅಮಿತ್ ಶಾ ಹೇಳಿದ್ದೇನು..- Bengaluru

ಬಿಜೆಪಿ ವಿರುದ್ಧ ಪ್ರಿಯಾಂಕಾ ಕಟುಟೀಕೆ - click...
ಮೋದಿ ಸರ್ವಾಧಿಕಾರಿ: ಉದ್ದೇಶ ಪೂರ್ವಕ ಟೀಕೆ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಉದ್ದೇಶ ಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಬಿಂಬಿಸಿ ಜನತೆಯ ಮನದಲ್ಲಿರುವ ಅವರ ಚಿತ್ರಣವನ್ನು ವಿರೋಧಿಗಳು ವಿರೂಪಗೊಳಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರಿದರು.

ನೂತನವಾಗಿ ಆರಂಭಿಸಿರುವ ಸಂಸದ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಹೇಳಿಕೆ ನೀಡಿರುವ ಅವರು, ವಿರೋಧದ ನಡೆಯೂ ಮೋದಿ    ಬಲಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರ ಕತೃತ್ವ ಶಕ್ತಿ ಹೆಚ್ಚು ಬಲಗೊಳ್ಳುತ್ತದೆ. ಜನರ ಬೆಂಬಲವು ಮೋದಿ ಅವರೊಂದಿಗೆ ದೃಢವಾಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸಿದ್ಧಾಂತ ವಿರೋಧಿಸುವ ಕೆಲವು ಜನರು ಸತ್ಯ ಮರೆಮಾಚುತ್ತಲೇ ಇರುತ್ತಾರೆ. ಮೋದಿ ಅವರ ಇಮೇಜ್‍ಗೆ ಧಕ್ಕೆ ತರಲು ಸಂಘಟಿತ ಪ್ರಯತ್ನ ಮಾಡುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ,   ಅವರು ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸುವ ಗುಣ ಹೊಂದಿದ್ದಾರೆ ಎಂದು ಮೋದಿ ಅವರ ವ್ಯಕ್ತಿತ್ವದ ವಿಶ್ಲೇಷಣೆ ಮಾಡಿದ್ದಾರೆ.
ಮೋದಿ   ಅವರೊಂದಿಗೆ ನಿಕಟವಾಗಿದ್ದುಕೊಂಡು  ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟವಾಗಿದೆ. ಮೊದಲು ಗುಜರಾತ್‍ನಲ್ಲಿ ಅವರೊಂದಿಗೆ ಕೆಲಸ ಮಾಡಿದೆ. ಈಗ ಕೇಂದ್ರದಲ್ಲಿ ಅವರೊಟ್ಟಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ ಎಂದರು.
 

0/Post a Comment/Comments