ಬಿಜೆಪಿ ವಿರುದ್ಧ ಪ್ರಿಯಾಂಕಾ ಕಟುಟೀಕೆ - Bengaluru

ಕಿತ್ತೂರು ಉತ್ಸವ : 2 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ - click...
 ಬಿಜೆಪಿ ವಿರುದ್ಧ ಸ್ವಾತಂತ್ರ್ಯ ಮಾದರಿ ಹೋರಾಟ 
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಲಖಿಂಪುರ್ ಖೇರಿಯ ಹಿಂಸಾಚಾರ ಮತ್ತು ಅಲ್ಲಿ ನಡೆದ ಅಮಾಯಕರ  ಸಾವು ಕುರಿತು ವಾರಣಾಸಿಯಲ್ಲಿ  ಭಾನುವಾರ ಮಾತನಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ  ಹೋರಾಡಿದ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹೋರಾಡಲು ದೃಢ ಸಂಕಲ್ಪ ತೊಟ್ಟಿದೆ’ ಎಂದು ಹೇಳಿದ್ದಾರೆ.
ಬರುವ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಪಕ್ಷದ ಅಭಿಯಾನ ಆರಂಭಿಸಿದ ಪ್ರಿಯಾಂಕಾ ಅವರು,  ‘ನವರಾತ್ರಿ ಉಪವಾಸ ಮಾಡುತ್ತಿದ್ದೇನೆ’ ಎಂದೂ ಹೇಳಿದರು.


‘ಬಿಜೆಪಿ ಸರ್ಕಾರದಲ್ಲಿ ದಲಿತರು, ಬುಡಕಟ್ಟು ಜನಾಂಗ, ಮಹಿಳೆಯರು ಮತ್ತು ತಳಮಟ್ಟದ ಕುಟುಂಬಗಳ ಪರಿಸ್ಥಿತಿ ಸುಧಾರಣೆ ಕಾಣುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ  ಅವರೆಲ್ಲ ದುಃಖ ಅನುಭವಿಸುವಂತಾಗಿದೆ’    ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತು ಮೋದಿ ವಿರುದ್ಧ ಕಟುಟೀಕೆ ಮಾಡಿದರು. ಕಾಂಗ್ರೆಸ್ ಮುಖಂಡರು ಇದ್ದರು.

0/Post a Comment/Comments