ಕೌಶಲಾಭಿವೃದ್ದಿ ಕೇಂದ್ರ ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ - Bengaluru

ರಸಗೊಬ್ಬರ ಪೂರೈಕೆಗೆ ಕೃಷಿ ಸಚಿವರಲ್ಲಿ ಮನವಿ - click...

‘ಕೈಗಾರಿಕೆಗೆ ಕೌಶಲಾಭಿವೃದ್ಧಿ ಪಠ್ಯಕ್ರಮ ಹೊಂದಿದ ರಾಜ್ಯ’ 
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಕೈಗಾರಿಕೆಗಳಿಗೆ ಅಗತ್ಯವಿರುವ ಸಿದ್ದ ತರಬೇತಿಯನ್ನು ನೀಡುತ್ತಿರುವ ಪಠ್ಯಕ್ರಮ ಹೊಂದಿರುವ ದೇಶದ ಪ್ರಮುಖ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕದ್ದಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ದಿ ಸಚಿವÀ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. 
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ. ಜೆ. ಜಾರ್ಜ್ ಅವರು ಸಿಎಸ್‍ಆರ್ ನಿಧಿಯನ್ನು ಬಳಸಿಕೊಂಡು ಸ್ಥಾಪಿಸಿರುವ ಎರಡನೇ ಕೌಶಲಾಭಿವೃದ್ದಿ ಕೇಂದ್ರವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲ ತಕ್ಕಂತೆ ಉದ್ಯೋಗಕ್ಕೆ ಬೇಕಾದ ಕೌಶಲ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ದೇಶದ ಯುವ ಜನಾಂಗಕ್ಕೆ ಈ ಬಗ್ಗೆ ಸೂಕ್ತ ಅವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ  ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ ನಿರ್ಮಾಣವಾಗುತ್ತಿದೆ.  ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 
ಮಾಜಿ ಸಚಿವ ಮತ್ತು ಸರ್ವಜ್ಞ ನಗರ ಶಾಸಕ ಕೆ.ಜೆ. ಜಾರ್ಜ್ ಮಾತನಾಡಿ, ಯುವಕರು ಹಾಗೂ  ಕಾರ್ಮಿಕ ವರ್ಗದವರಿಗೆ ಅಗತ್ಯ ಕೌಶಲ ರೂಢಿಸಿಕೊಳ್ಳುವುದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಸ್ವಉದ್ಯೋಗ ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದರು.


ಕೊರೊನಾ ನಂತರದ ಬದುಕಿನಲ್ಲಿ ಬದಲಾವಣೆಯಾಗಿದೆ. ಹಲವಾರು ಜನರು ಜೀವನಕ್ಕೆ ಅವಲಂಬಿತವಾಗಿದ್ದ ಉದ್ಯೋಗ ಕಳೆದುಕೊಂಡಿದ್ದಾರೆ. ಹೊಸ ಉದ್ಯೋಗಕ್ಕೆ ಬೇಕಾಗಿರುವ ಕೌಶಲ ಕೊರತೆ ಇರುವುದನ್ನು ಗಮನಿಸಿದೆ. ಇದಕ್ಕೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೌಶಲಾಭಿವೃದ್ದಿ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಅದರಲ್ಲಿ ಸಫಲ ಕೂಡಾ ಆಗಿದ್ದೇವೆ ಎಂದರು. 
ಸಂಸದ ಪಿ. ಸಿ. ಮೋಹನ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕರ್ನಾಟಕ ಓಲಿಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜ್, ಪರಿಷತ್ ಸದಸ್ಯ ರಮೇಶ್ ಗೌಡ ಉಪಸ್ಥಿತರಿದ್ದರು.

0/Post a Comment/Comments