ಡಾ. ಮಹಾಂತಯ್ಯ ಶಾಸ್ತ್ರಿ ಸೇವೆ ಅನನ್ಯ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ನಾಡಿನಲ್ಲಿ ಧಾರ್ಮಿಕ, ಅಧ್ಯಾತ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸಿ ಜನತೆಗೆ ಜ್ಞಾನಾರ್ಜನೆಯ ಧಾರೆ ಎರೆಯುತ್ತಿರುವ ಶ್ರೀಗಳ ಕಾರ್ಯ ಪ್ರಶಂಶನೀಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸಂಜಯ ಸಿದ್ದಣ್ಣವರ ಬಣ್ಣಿಸಿದರು.
ಇಲ್ಲಿಯ ಬಸವನಗರದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ನಡೆದ ಲಲಿತ ಸಹಸ್ರ ಪಠಣ, ಕ್ಷೇತ್ರನಾಥ ಗೋತ್ರ ಪುರುಷ ಮಹಾ ಹೋಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ದೇಶಕ್ಕೆ ಬಂದಿರುವ ಭೀಕರ ಕೊರೊನಾ ರೋಗ ದೂರಾಗಲಿ, ಕ್ಷೇತ್ರದ ಜನ ಒಳ್ಳೆ ಫಲಗಳನ್ನು ಕಾಣಲಿ ಎಂದು ಪ್ರಾರ್ಥಿಸಿದ ಅವರು, ಡಾ.ಮಹಾಂತಯ್ಯ ಶಾಸ್ತ್ರಿಗಳು ಈ ಒಂಬತ್ತು ದಿನಗಳ ಪಯರ್ಂತರ ನಡೆಯುವ ಮಹಾ ಹೋಮಗಳಲ್ಲಿ ಪ್ರತಿನಿತ್ಯವು ಕೂಡ ಒಂದು ತರಹದ ಹೋಮ ಹವನಾದಿಗಳನ್ನು ನೆರವೇರಿಸಿ ಸಕಲರಿಗೂ ಧಾರ್ಮಿಕ ದಾಸೋಹ ಬಡಿಸುತ್ತಿರುವ ಕಾರ್ಯ ಅನನ್ಯ ಎಂದರು.
ಪ್ರತಿಯೊಬ್ಬರೂ ತಪ್ಪದೇ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದೂ ಸೂಚಿಸಿದರು.
ಸಾನಿಧ್ಯ ವಹಿಸಿದ್ದ ಡಾ. ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಮಹಾಯಜ್ಞದಲ್ಲಿ ಎಲ್ಲರೂ ಭಾಗಿಯಾಗಿ ತಮ್ಮ ಕರ್ಮವನ್ನು ವಿಮೋಚನೆ ಮಾಡಿಕೊಳ್ಳಬೇಕು ಎಂದರು. ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ, ಡಾ.ಎಸ್.ಎಸ್. ಸಿದ್ದಣ್ಣವರ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಸತ್ಕರಿಸಲಾಯಿತು.
ಸೋಮನಾಥ ಸೊಪ್ಪಿಮಠ, ಸಂತೋಷ ಪಶುಪತಿ ಮಠ, ಪ್ರಭಯ್ಯ ಚಿಕ್ಕಮಠ, ಗೂಳಪ್ಪ ನೇಸರಗಿ, ಸತೀಶ್ , ಬಾಹುಬಲಿ ನಾಗನೂರು, ಅಡಿವೆಪ್ಪ ಕಾಜಗಾರ, ಬಸಪ್ಪ ಬಾಯವ್ವಗೋಳ, ಬಸವರಾಜ ಕಟ್ಟಿಮನಿ, ಪ್ರಶಾಂತ ಶಾಸ್ರ್ತಿ, ಆನಂದ ತೋಟಗಿ ಶ್ರೀಮಠದ ನೂರಾರು ಸದ್ಭಕ್ತರು ಇದ್ದರು.
Post a Comment