‘ಪಾಶ್ಚಿಮಾತ್ಯ ಪದ್ಧತಿ ಬಿಡಿ; ಸನಾತನ ಸಂಸ್ಕøತಿಯಡಿ ಸಾಗಿ' : ಶಾಸಕ ಮಹಾಂತೇಶ ಕರೆ - Bailhongal

ಹೊಸಳ್ಳಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ - click...

‘ಪಾಶ್ಚಿಮಾತ್ಯ ಪದ್ಧತಿ ಬಿಡಿ; ಸನಾತನ ಸಂಸ್ಕøತಿ ಮೈಗೂಡಿಸಿಕೊಳ್ಳಿ’

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ಪ್ರಸ್ತುತ ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೇ ಸನಾತನ    ಸಂಸ್ಕøತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ ಬದುಕು ಸುಖಮಯವಾಗುತ್ತದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಇಲ್ಲಿಯ ಮುರಗೋಡ ರಸ್ತೆಯ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ದಸರಾ ಉತ್ಸವ-2021 ಅಂಗವಾಗಿ ಪೃಥ್ವಿ ಗಾಡರ್ನ್ನಲ್ಲಿ ಭಾನುವಾರ ನಡೆದ ಗ್ರಂಥ ಲೋಕಾರ್ಪಣೆ, ಧ್ವನಿ ಸುರುಳಿ ಬಿಡುಗಡೆ ಹಾಗೂ ಜಿ ಟಿವಿ ಕಾಮಿಡಿ ಕಿಲಾಡಿಗಳ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಸರಾ ನವರಾತ್ರಿ ಉತ್ಸವದಲ್ಲಿ ಹಿಂದೂಗಳು ನಿರಂತರ ಒಂಬತ್ತು ದಿನಗಳ ಕಾಲ  ದೇವಿಗೆ ದೀಪ  ಹಾಕುತ್ತಾರೆ  ಹಾಗೂ ಉಡಿತುಂಬುತ್ತಾರೆ. ಅನಾದಿ ಕಾಲದಿಂದಲೂ ಶ್ರದ್ಧಾಭಕ್ತಿಯಿಂದ ಪೂಜಿಸುವ ಸಂಪ್ರದಾಯ ಮಾಡುತ್ತ ಬಂದಿದ್ದಾರೆ ಎಂದರು.

ನಿಜವಾದ ಧರ್ಮ, ಆಚಾರ, ವಿಚಾರ ಸಂಪ್ರದಾಯ, ಧಾರ್ಮಿಕ ಪದ್ದತಿಗಳನ್ನು ಆಚರಿಸುವುದರಿಂದ ಮನುಷ್ಯನ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ.  ಸಮಾನತೆ, ಸಹೋದರತೆಯಿಂದ  ಬಾಳುವುದು ಕಲಿಸುತ್ತದೆ. ಇದರಿಂದ ಇಡೀ ಮಾನವ ಕುಲದ ಸನ್ಮಾರ್ಗದ ಜೀವನಕ್ಕೆ ಅಡಿಪಾಯ ಹಾಕಿದಂತಾಗುತ್ತದೆ   ಎಂದು ವ್ಯಾಖ್ಯಾನಿಸಿದರು.

ನಾಡಿನಲ್ಲಿ ನಿರಂತರ ಧಾರ್ಮಿಕ, ಅಧ್ಯಾತ್ಮಿಕ ಸಾಮಾಜಿಕ  ಕಾರ್ಯಕ್ರಮಗಳನ್ನು ಆಯೋಜಿಸಿ ಜನತೆಗೆ ಜ್ಞಾನಾರ್ಜನೆ ತುಂಬುತ್ತಿರುವ  ಡಾ.ಮಹಾಂತೇಶ  ಶಾಸ್ರ್ತಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದೂ ಬಣ್ಣಿಸಿದರು.

ನಯಾನಗರ ಅಭಿನವಸಿದ್ದಲಿಂಗ ಸ್ವಾಮೀಜಿ, ಶಾಖಾ   ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ದೇವರು ಸಾನಿಧ್ಯ ವಹಿಸಿ ಆಶೀರ್ವಚನ  ನೀಡಿದರು.

ಬೆಳಗಾವಿ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಚಿತ್ರನಟ ಶಿವರಂಜನ ಬೋಳಣ್ಣವರ, ಕಲಾವಿದ ಸಿ.ಕೆ.ಮೆಕ್ಕೇದ ಮಾತನಾಡಿದರು.

ವೇದಿಕೆ ಮೇಲೆ ಅಲ್ಪಸಂಖ್ಯಾತರ ನಿಗಮದ ರಾಜ್ಯಾಧ್ಯಕ್ಷ ಮುಕ್ತಾರ ಪಠಾಣ, ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ, ಪತ್ರಕರ್ತ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಕಸಾಪ ತಾಲೂಕ ಘಟಕದ ಮಾಜಿ ಅಧ್ಯಕ್ಷ ಈಶ್ವರ ಹೋಟಿ, ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ,  ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಬಿ.ಬಿ. ಗಣಾಚಾರಿ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಪುರಸಭೆ ಸದಸ್ಯ ವಿಜಯ ಬೋಳಣ್ಣವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯುವ ವೇದಿಕೆ ಅಧ್ಯಕ್ಷ ಅನಂದ ಬ್ಯಾಕೋಡ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಇದ್ದರು.

ದೇವಸ್ಥಾನದ    ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಂಥ ಹಾಗೂ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು. ಜಿ ಟಿವಿ ಕಾಮಿಡಿ ಕಿಲಾಡಿಗಳಾದ ಮಿಂಚು , ಸಂತು, ಅಪಣ್ಣ   ಕಲಾತಂಡದಿಂದ  ಹಾಸ್ಯೋತ್ಸವ ಜರುಗಿತು. ಡಿಕೆಡಿ ಡ್ಯಾನ್ಸ್ ಖ್ಯಾತಿಯ ವಿನೋದ ತಂಡದಿಂದ ನೃತ್ಯೋತ್ಸವ ಜರುಗಿತು.

ಜಾತ್ರಾ ಕಮೀಟಿ ಸರ್ವ ಸದಸ್ಯರು, ಸಾರ್ವಜನಿಕರು ಇದ್ದರು. ಶೈಲಾ ಕೊಕ್ಕರೆ ನಿರೂಪಿಸಿದರು. ಮಂಜುನಾಥ ಜ್ಯೋತಿ ವಂದಿಸಿದರು.

ಶಿಲೇದಾರಗೆ ಗುರುರತ್ನ ಪ್ರಶಸ್ತಿ

ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದ ದಸರಾ ಉತ್ಸವ-2021 ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಅವರಿಗೆ ‘ಗುರುರಕ್ಷೆ' ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು.

 

0/Post a Comment/Comments