‘ದುರ್ಗಾಮಾತಾ ದೌಡ್'ನಲ್ಲಿ ಮನೋಹರ ಮಠದ ಅಭಿಮತ - Bailhongal


ಬೈಲಹೊಂಗಲದಲ್ಲಿ 'ಕಾಮಿಡಿ ಕಿಲಾಡಿ' ಖ್ಯಾತಿಯ ಮಿಂಚು, ಅಪ್ಪಣ್ಣ  - click...

 ಕಿತ್ತೂರು ಉತ್ಸವದ ಉಪಸಮಿತಿ ಸಭೆಯ ವಿಡಿಯೋ ನೋಡಿ...

‘ದುರ್ಗಾಮಾತಾ ದೌಡ್'ನಲ್ಲಿ ಮನೋಹರ ಮಠದ ಅಭಿಮತ

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ‘ನಮ್ಮ ಸಹನೆ ದೌರ್ಬಲ್ಯವೆಂದು ತಿಳಿದುಕೊಳ್ಳುವುದು ಬೇಡ. ನಮಗೆ ಸೌಹಾರ್ದತೆ ಬೇಕಾಗಿದೆ. ಮುಸ್ಲಿಂರು, ಹಿಂದೂಗಳು ಒಟ್ಟಾಗಿ ಬದುಕಿ ಸಾಮರಸ್ಯದ ಜಗತ್ತು ಮತ್ತು ಸೌಧ ಕಟ್ಟೋಣ ಎಂದು ವಿಶ್ವಹಿಂದೂ ಪರಿಷದ್ ಉತ್ತರ ಕರ್ನಾಟಕ ಪ್ರಾಂತ ಸಹ ಸಂಘಟನಾ ಮಂತ್ರಿ ಮನೋಹರ ಮಠದ ಕರೆ ನೀಡಿದರು.

ಇಲ್ಲಿಯ ವಿಶ್ವಹಿಂದೂ ಪರಿಷದ್, ಬಜರಂಗದಳ ತಾಲೂಕು ಘಟಕದಿಂದ ನವರಾತ್ರಿ ದಸರಾ ಉತ್ಸವ ಅಂಗವಾಗಿ ಭಾನುವಾರ ನಡೆದ ನಾಲ್ಕನೇ ದಿನದ ಶ್ರೀದುರ್ಗಾ ಮಾತಾ ದೌಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಹಿಂದೂಗಳ ರಕ್ತದಲ್ಲಿ ಹಾಗೂ ಧರ್ಮದಲ್ಲಿ ಸರ್ವಧರ್ಮ ಸಮಭಾವ ಇದೆ. ಆದರೆ ಧರ್ಮಕ್ಕೆ ಅನ್ಯಾಯ ಮತ್ತು ಸಂಕಷ್ಟ ಎದುರಾದಾಗ ಜಗನ್ಮಾತೆ ನವದುರ್ಗೆ ಅವತಾರ ತಾಳಿ ಧರ್ಮ ಕಾಪಾಡಿದ ರೀತಿ ನಮ್ಮ ಸಂಘಟನೆಗಳು ಮಾಡುತ್ತಿವೆ ಎಂದು ಸಮರ್ಥಿಸಿಕೊಂಡರು.

ವಿಶ್ವಹಿಂದೂ ಪರಿಷದ್, ಬಜರಂಗದಳ ಸಮಾಜದಲ್ಲಿ 66 ವರ್ಷಗಳಿಂದ ನಿರಂತರವಾಗಿ ಸೇವೆ, ಸುರಕ್ಷೆ ಮತ್ತು ಸಂಸ್ಕಾರ ಎಂಬ ಉದ್ದೇಶಗಳೊಂದಿಗೆ ಕೆಲಸ ಮಾಡುತ್ತ ಬರುತ್ತಿದೆ. ಅನೀತಿ, ಅನ್ಯಾಯ ಖಂಡಿಸಿ ಧರ್ಮ ಪ್ರತಿμÁ್ಠಪನೆ ಮಾಡುವ ಕಾರ್ಯ ಮಾಡುತ್ತಿವೆ ಎಂದರು.

ಕಾಶ್ಮೀರದಲ್ಲಿ ಆಗಿರುವ ಪಂಡಿತರ ಹತ್ಯೆಯನ್ನು ಖಂಡಿಸುವ ಕೆಲಸ ಎಲ್ಲ ಮುಸ್ಲಿಂರು ಮಾಡಬೇಕು. ಹಿಂದೂಗಳ ಗುಣ ‘ಓನ್ಲೀ ಅಲ್ಲ. ‘ಆಲ್ಸೋ' ಗುಣವಾಗಿದೆ. ರಾಮ, ಶಿವ, ಕೃಷ್ಣ ಒಬ್ಬನೇ ದೇವರು ಅಂತ ಹೇಳಿಲ್ಲ. 'ಏಸೂ ಆಲ್ಸೋ ಗಾರ್ಡ್, ಅಲ್ಲಾ ಆಲಸೋ ಗಾರ್ಡ್, ರಾಮಾ ಆಲಸೋ ಗಾರ್ಡ್' ಎನ್ನುವ ಏಕೈಕ ಜನಾಂಗ ಇದ್ದರೆ ಅದು ಹಿಂದೂಗಳು ಮಾತ್ರ. ಇಂತಹ ಜನಾಂಗಕ್ಕೆ ಸಮನ್ವಯತೆ, ಸಹೋದರತೆ ಪಾಠ ಹೇಳಿಕೊಡುವುದು ಬೇಕಾಗಿಲ್ಲ. ಲವ್ ಜಿಹಾದ್ ನಿಲ್ಲಿಸುವಂತೆ ಮುಂದಿನ ದಿನಗಳಲ್ಲಿ ಮುಸ್ಲಿಂರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಕ್ಕ ಉತ್ತರ ನೀಡಲು ಹಿಂದೂ ಯುವಕರಿಗೆ, ಸಂಘನೆಯವರಿಗೆ ತಾಕತ್ತಿದೆ' ಎಂದು ಎಚ್ಚರಿಕೆ ನೀಡಿದರು. 

ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಮ್, ಜಿಲ್ಲಾ ಧರ್ಮಚಾರಿ ಪ್ರಮುಖ ಬಸವರಾಜ ಹಳಗಲಿ, ಜಿಲ್ಲಾ ಮಠಮಂದಿರಗಳ ಸಂಪರ್ಕ ಪ್ರಮುಖ ಸತೀಶ ಮಾಳವದೆ, ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಶಿವಾನಂದ ಬಡ್ಡಿಮನಿ, ರಾಜು ಕುಡಸೋಮಣ್ಣವರ, ಸೋಮನಾಥ ಸೊಪ್ಪಿಮಠ, ಶಿವಾನಂದ ಕೋಲಕಾರ,  ಆನಂದ ಹಿರೇಮಠ, ಮಂಜುನಾಥ ಜ್ಯೋತಿ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಬಸವರಾಜ ದೊಡಮನಿ, ರವಿ ವನ್ನೂರ, ಅಜಯ ಪಟ್ಟಣಶೆಟ್ಟಿ, ಯುವಕರು ಇದ್ದರು.

0/Post a Comment/Comments