101 ಮುತ್ತೈದೆಯರಿಗೆ ಬಾಗಿನ ಸಮರ್ಪಣೆ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಇಲ್ಲಿಯ ಮುರಗೋಡ ರಸ್ತೆಯ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವರ್ಣರಂಜಿತವಾಗಿ ನಡೆದ ನವರಾತ್ರಿ ದಸರಾ ಉತ್ಸವ-2021ಕ್ಕೆ ಶುಕ್ರವಾರ ರಾತ್ರಿ ಸಂಭ್ರಮದ ತೆರೆಕಂಡಿತು.
ಉತ್ಸವ ಕೊನೆಯ ದಿನ ತಾಯಿ ದುರ್ಗಾಪರಮೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವ ದೊಂದಿಗೆ ಬನ್ನಿ ಮಂಟಪಕ್ಕೆ ಹೋಗಿ ಬನ್ನಿ ಮುಡಿಯುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಇದೇ ಸಂದರ್ಭದಲ್ಲಿ 101 ಮುತ್ತೈದೆಯರಿಗೆ ಬಾಗಿನ ಸಮರ್ಪಿಸಲಾಯಿತು. ನಂತರ ಮಹಾಪ್ರಸಾದ ನಡೆಯಿತು.
ಡಾ. ಮಹಾಂತಯ್ಯ ಶಾಸ್ತ್ರಿ ಮಾತನಾಡಿ, ‘ತಾಯಿ ದುರ್ಗೆಯ ಆರಾಧನೆ ಮಾಡಿರುವ ಸಕಲ ಸದ್ಭಕ್ತರಿಗೆ ತಾಯಿ ಒಳ್ಳೆಯದನ್ನು ಮಾಡಲಿ' ಎಂದು ಪ್ರಾರ್ಥಿಸಿದರು.
ಪ್ರಗತಿಪರ ರೈತ ಮಲ್ಲಿಕಾರ್ಜುನ ಬೊಳನ್ನವರ ಮಾತನಾಡಿ, 9 ದಿನಗಳ ಪಯರ್ಂತ ಮಹಾಂತಯ್ಯ ಶಾಸ್ತ್ರಿ ಅವರು ತಮ್ಮ ಚಿಕ್ಕದಾಗಿರುವ ದೇವಸ್ಥಾನದಲ್ಲಿ ಬೃಹದಾಕಾರವಾದ ಕಾರ್ಯಕ್ರಮವನ್ನು ಮಾಡುವುದರ ಜೊತೆಗೆ ಎಲ್ಲರಿಗೂ ಒಳಿತನ್ನು ಬಯಸುವ ಅಪರೂಪದ ಶಾಸ್ತ್ರಿಗಳಾಗಿದ್ದಾರೆ. ವಿಶೇಷ ಗೌರವ ಕೊಟ್ಟು ಸತ್ಕಾರ ಮಾಡುವ ಸಹನಾ ಮೂರ್ತಿಗಳು ಇವರಾಗಿದ್ದಾರೆ. ಇವರ ಕಾರ್ಯಗಳು ನಾಡಿಗೆ ಹೆಚ್ಚಿನ ಕೀರ್ತಿ ತಂದಿವೆ ಎಂದು ಬಣ್ಣಿಸಿದರು.
ಶ್ರೀಕಾಂತ ಮತ್ತಿಕೊಪ್ಪ, ಉಳವಪ್ಪ
ಬಡ್ಡಿಮನಿ, ಮಹಾಂತೇಶ ಮತ್ತಿಕೊಪ್ಪ, ಶಿವರಂಜನ ಬೊಳನ್ನವರ, ಸಂತೋಷ ರಾಯರ, ವಿರುಪಾಕ್ಷಿ ಗಣಾಚಾರಿ, ಮಡಿವಾಳಪ್ಪ ಹೋಟಿ, ಉಮೇಶ ಪವಾರ. ಬಸವರಾಜ ಸಾಲಿಮಠ, ಮಹಾಂತೇಶ ತುರುಮರಿ ಹಾಜರಿದ್ದರು.
Post a Comment