ಬೈಲಹೊಂಗಲದಲ್ಲಿ 'ಕಾಮಿಡಿ ಕಿಲಾಡಿ' ಖ್ಯಾತಿಯ ಮಿಂಚು, ಅಪ್ಪಣ್ಣ - Bailhongal

ಕಿತ್ತೂರು ಉತ್ಸವ : 2 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ - click...
 
ಆರಾದ್ರಿಮಠ ಶ್ರೀಗಳಿಂದ ಅನನ್ಯ ಕಾರ್ಯ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ಭಕ್ತರಿಗೆ ಶ್ರೀಮಾತಾ  ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ತಮ ಕಾರ್ಯಕ್ರಮಗಳ ಸವಿರುಚಿ ಉಣಬಡಿಸಲಾಗುತ್ತಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದ ಅಧ್ಯಕ್ಷ ಮಹಾಂತೇಶ ತುರಮರಿ ಅಭಿಪ್ರಾಯಪಟ್ಟರು.


ಇಲ್ಲಿಯ  ಬಸವನಗರದ  ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ನಡೆದ ದಸರಾ ಹಬ್ಬದ ನಾಲ್ಕನೇ ದಿನದ ಅಂಗವಾಗಿ ಬೆಳಿಗ್ಗೆ ಅಮ್ಮನವರಿಗೆ ಕ್ಷೇತ್ರನಾಥ ಗೋತ್ರ, ಪುರುಷ ಹೋಮ-ಹವನ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಕ್ಷೇತ್ರನಾಥ ಗೋತ್ರ ಪುರುಷ ಹೋಮ-ಹವನಗಳನ್ನು ಮಾಡುವುದರಿಂದ ನಾಡಿನಾದ್ಯಂತ  ಸ್ಥಳ ಶುದ್ಧಿಯಾಗುತ್ತದೆ.  ಪೂಜೆಯಲ್ಲಿ ನಾವು ಭಾಗಿಯಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಹೇಳಿದರು.
ಕಾಮಿಡಿ ಕಿಲಾಡಿ ಖ್ಯಾತಿಯ ಮಿಂಚು ಹಾಗೂ ಅಪ್ಪಣ್ಣ ಮಾತನಾಡಿ, ನಮ್ಮ ಸಿನಿ ಪಯಣದ ಜೀವನದಲ್ಲಿ ಇಂತಹ ಅಭೂತಪೂರ್ವವಾದ ಕಾರ್ಯಕ್ರಮ ಯಾವತ್ತೂ ಆಗಿಲ್ಲ.  ಇಲ್ಲಿ ಆಯೋಜನೆ ಮಾಡಲಾಗಿರುವ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಹೇಳಿದರು
ಸಾನಿಧ್ಯ ವಹಿಸಿದ್ದ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಮಹಾಯಜ್ಞದಲ್ಲಿ ಎಲ್ಲರೂ ಭಾಗಿಯಾಗಿ ತಮ್ಮ ಕರ್ಮ ವಿಮೋಚನೆ ಮಾಡಿಕೊಳ್ಳುವುದು ಶ್ರೇಷ್ಠವಾದ ದಿನ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ತುರಮರಿ ದಂಪತಿ,  ಕಾಮಿಡಿ ಕಿಲಾಡಿ ಖ್ಯಾತಿಯ ಮಿಂಚು ಹಾಗೂ ಅಪ್ಪಣ್ಣ ಅವರನ್ನು ದೇವಸ್ಥಾನದ ವತಿಯಿಂದ ಸತ್ಕರಿಸಲಾಯಿತು.
ಶ್ರೀಮಠದ ಮುಖಂಡರು, ನೂರಾರು ಭಕ್ತರು ಇದ್ದರು.

0/Post a Comment/Comments