‘ಹೋಮಕ್ಕೆ ಉಂಟು ವಿಜ್ಞಾನದ ಹಿನ್ನೆಲೆ’ : ಇಓ ಸುಭಾಸ ಸಂಪಗಾಂವಿ ಅಭಿಮತ - Bailhongal

ಅಂಚೆ ವಿಮಾಮೇಳಕ್ಕೆ ನಿಜಗುಣಾನಂದ ಸ್ವಾಮೀಜಿ ಚಾಲನೆ - click...

‘ಹೋಮಕ್ಕೆ ಉಂಟು ವಿಜ್ಞಾನದ ಹಿನ್ನೆಲೆ’

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ಹೋಮ, ಹವನಗಳಿಗೆ ವೈಜ್ಞಾನಿಕ ಹಿನ್ನೆಲೆಯಿದ್ದು,    ಇವುಗಳನ್ನು ನೆರವೇರಿಸುವುದರಿಂದ ಮನುಷ್ಯನಲ್ಲಿರುವ ರೋಗರುಜಿನಗಳು ವಾಸಿಯಾಗುತ್ತವೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ ತಿಳಿಸಿದರು.

ಇಲ್ಲಿಯ  ಬಸವ  ನಗರದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ ನಡೆದ ಮಹಾಚಂಡಿಕಾಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೀರಶೈವ ಸನಾತನವಾದ ಧರ್ಮವಾಗಿದೆ. ಈ ಧರ್ಮ ದಲ್ಲಿ ಇಂತಹ ಪೂಜೆ ಅನುಷ್ಠಾನಗಳನ್ನು ಮಾಡುವುದರಿಂದ ಲೋಕಕ್ಕೆ, ಮನುಷ್ಯ ಕುಲಕ್ಕೆ ಹಾಗೂ ಪ್ರಾಣಿ ಕುಲಕ್ಕೆ ಖಂಡಿತವಾಗಿಯೂ ಒಳ್ಳೆಯದು ಆಗುತ್ತದೆ ಎಂದರು. 

ಶೃಂಗೇರಿ ಶಾರದಾ ಪೀಠದ ಬ್ರಾಹ್ಮಣರಿಂದ ಲಲಿತ ಸಹಸ್ರ ಪಠಣ ನೆರವೇರಿತು.  ಪ್ರಧಾನ ಅರ್ಚಕÀ ಮನೋಹರ ಆಚಾರ್ಯ ಅವರಿಂದಲೂ ಲಲಿತ ಸಹಸ್ರನಾಮ ನಡೆಯಿತು.   ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರಿ ಮಾತನಾಡಿ, ಆರಾಧನೆಯಿಂದ ಬಂಧನ ಮತ್ತು ಕಷ್ಟಗಳು ಖಂಡಿತವಾಗಿ ಪರಿಹಾರ ಆಗುತ್ತವೆ ಎಂದರು.

ಕಟಕೋಳ ಗ್ರಾಮದ ಪೊಲೀಸ್ ಪಾಟೀಲ್,  ಪ್ರಶಾಂತ ಶಾಸ್ತ್ರಿ, ಬಸವರಾಜ ಕಟ್ಟಿಮನಿ, ಭೀಮು ನೇಸರ್ಗಿ,  ಸಿದ್ದಾರೂಢ ಕಾದ್ರೊಳ್ಳಿ, ಬಸವರಾಜ್ ಬೈರನಟ್ಟಿ ಇದ್ದರು.