‘ಜೀವನ ಸಾರ್ಥಕತೆಗೆ ಬೇಕು ಆಧ್ಯಾತ್ಮಿಕ ಜ್ಞಾನ’
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಉತ್ತಮ ಬದುಕು ರೂಪಿಸಿಕೊಳ್ಳಲು ಜ್ಞಾನ ಅಗತ್ಯವಾಗಿ ಬೇಕು. ಆದರೆ ಜೀವನ ಸಾರ್ಥಕತೆಗೆ ಅಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ ಎಂದು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಅಭಿಪ್ರಾಯಪಟ್ಟರು.
ಇಲ್ಲಿಯ ಮುರಗೋಡ ರಸ್ತೆಯ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಉತ್ಸವ ಅಂಗವಾಗಿ ಮಂಗಳವಾರ ನಡೆದ ಮಹಾಚಂಡಿಕಾಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಅವರನ್ನು ಪ್ರೇರೇಪಿಸುತ್ತಿರುವ ಡಾ.ಮಹಾಂತೇಶ ಶಾಸ್ರ್ತಿಗಳ ಕಾರ್ಯ ಸ್ಮರಣೀಯವಾಗಿದೆ. ದುರ್ಗಾದೇವಿಯ ದೇವಸ್ಥಾನವು ಚಿಕ್ಕದಾದರೂ ಕೂಡ ಬೃಹತ್ ಮಟ್ಟದಲ್ಲಿ ಮಹಾ ಚಂಡಿಕಾಯಾಗವನ್ನು ಮಾಡುತ್ತಿರುವ ಶಾಸ್ತ್ರಿಗಳವರ ಕಾರ್ಯ ಮೆಚ್ಚುವಂಥಹದ್ದು ಎಂದು ಬಣ್ಣಿಸಿದರು.
ಕೊರೊನಾ ಭೀಕರ ಸೋಂಕಿಗೆ ತುತ್ತಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾಯಿ ದುರ್ಗಾಪರಮೇಶ್ವರಿಯ ಆಶೀರ್ವಾದ ಇರಲಿ. ಅವರ ಮನೆತನಕ್ಕೆ ಬಂದ ಕಷ್ಟ ಮತ್ತು ನೋವನ್ನು ಆ ತಾಯಿ ದೂರ ಮಾಡಲಿ ಎಂದು ಪ್ರಾರ್ಥಿಸಿದರು.
ಸರ್ವೋತ್ತಮ ಜಾರಕಿಹೊಳಿ, ಪ್ರಮೋದಕುಮಾರ ವಕ್ಕುಂದಮಠ, ಮಹಾಬಳೇಶ್ವರ ಕುಡಸೋಮನ್ನವರ, ಸೋಮನಾಥ ಸೊಪ್ಪಿಮಠ, ಕುಮಾರ ಹೊನ್ನೂರ, ಸಿದ್ದರಾಮ ಲಿಂಗಶೆಟ್ಟಿ, ಅಡಿವಪ್ಪ ಕಾಜಗಾರ, ಆದರ್ಶ ಗುಂಡಗವಿ, ಶ್ರೀಮಠದ ಭಕ್ತರು ಇದ್ದರು.
Post a Comment