ದೇವಿ ಆರಾಧನೆ: ದೋಷ ಪರಿಹಾರಕೆ ದಾರಿ : ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಪ್ರಾಯ - Bailhongal

 ರಾಯಣ್ಣ ಯುವಸಂಘಟನೆ ಸದಸ್ಯತ್ವಕ್ಕೆ ದೊಡ್ಡಗೌಡರ ಚಾಲನೆ - click...

ದೇವಿ ಆರಾಧನೆ: ದೋಷ ಪರಿಹಾರಕೆ ದಾರಿ

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: 9ದಿನಗಳ  ಕಾಲ ನಿರಂತರವಾಗಿ  ದೇವಿ ಆರಾಧನೆ ಮಾಡುವುದರಿಂದ ಮನುಷ್ಯನ ಸಕಲ ದೋಷಗಳು ಪರಿಹಾರವಾಗಿ ನೆಮ್ಮದಿಯ ಜೀವನವನ್ನು ಕಾಣುವ ಯೋಗ ಬರುತ್ತದೆ ಎಂದು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹೇಳಿದರು. 

ಇಲ್ಲಿಯ ಮುರಗೋಡ ರಸ್ತೆಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ನಾಡಹಬ್ಬದ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ   ಭಾಗವಹಿಸಿ ಮಾತನಾಡಿದ ಅವರು, ಇಂತಹ  ಧಾರ್ಮಿಕ ಕಾರ್ಯಗಳನ್ನು  ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಅವರು ಮಾಡುತ್ತಿರುವುದು ನಮಗೆ ಎಲ್ಲಿಲ್ಲದ ಸಂತೋಷ ತರಿಸುತ್ತದೆ ಎಂದು ಹರ್ಷಪಟ್ಟರು.

ಮನುಷ್ಯ ಜೀವನದಲ್ಲಿ ಎಲ್ಲವನ್ನೂ ಗಳಿಸಬಹುದು, ದೊಡ್ಡ ಸಾಧನೆ ಮಾಡಬಹುದು. ಆದರೆ ನೆಮ್ಮದಿ ಸಿಗಬೇಕಾದರೆ  ದೇವಿಯ ಆರಾಧನೆ ಮತ್ತು ಧಾರ್ಮಿಕ   ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದರಿಂದ ಮಾತ್ರ ಸಿಗಬಲ್ಲದು ಎಂದು ಅಭಿಪ್ರಾಯಪಟ್ಟರು.

ಗೋಕಾಕ ನಗರಸಭೆಯ  ಮುಖ್ಯಾಧಿಕಾರಿ  ಶಿವಾನಂದ ಹಿರೇಮಠ ಮಾತನಾಡಿ,   ಪ್ರತಿವರ್ಷ ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳಲಿಕ್ಕೆ ದೇವಸ್ಥಾನಕ್ಕೆ ಬರುವುದು ನಮ್ಮ ಮನೆತನದ ವಾಡಿಕೆಯಾಗಿದೆ.  ತಾಯಿಯನ್ನು ಪೂಜಿಸುವುದರಿಂದ ನಮಗೆ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು. 

ಶೈಲಾ ಕೊಕ್ಕರಿ, ಪ್ರೀತಿ ಆರಾದ್ರಿಮಠ, ವಿಜಯಲಕ್ಷ್ಮಿ ಹಿರೇಮಠ,  ಅನುμÁ ಕಾಜಗಾರ,  ಸಿದ್ಧಾರೂಢ ಹೊನ್ನಪ್ಪನವರ,   ಅಡಿವೆಪ್ಪ ಕಾಜಗರ,  ಸಿದ್ದರಾಮ ಲಿಂಗಶೆಟ್ಟಿ,  ಸಿದ್ಧಾರೂಢ ಕಿತ್ತೂರ  ಇದ್ದರು.