ಹಾಜಿ ಮಸ್ತಾನೊ.. ಏನ್ ಗೋಮಾಜ್ ಕಾಪ್ಸೆನೊ..? - click...
ದಸರಾ ಉತ್ಸವ ನಿಮಿತ್ತ ಮಹಿಳೆಯರಿಗೆ ವಿವಿಧ ಸ್ಪರ್ಧೆ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ‘ದಸರಾ ಉತ್ಸವ ಪ್ರಯುಕ್ತ ಏರ್ಪಡಿಸಿರುವ ರಂಗೋಲಿ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಮಹಿಳೆಯರ ದೈನಂದಿನ ಬದುಕಿಗೆ ಸ್ಫೂರ್ತಿ ತುಂಬಲಿವೆ ಎಂದು ಸ್ತ್ರೀಶಕ್ತಿ ಸಂಘದ ಮುಖ್ಯಸ್ಥೆ ಅನಿತಾ ಹೋಟಿ ಅಭಿಪ್ರಾಯಪಟ್ಟರು.
ಇಲ್ಲಿಯ ಗಣಾಚಾರಿ ಕಲ್ಯಾಣ ಮಂಟಪದ ಪೃಥ್ವಿ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ರಂಗೋಲಿ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾದ ಹಕ್ಕು ಮಹಿಳೆಯರಿಗೂ ದೊರೆಯಬೇಕು. ಸಮಾನ ಗೌರವವೂ ಪ್ರಾಪ್ತವಾಗಬೇಕು. ಈ ವರ್ತನೆ ಎಲ್ಲರಲ್ಲಿ ಕಾಣಬೇಕಾಗಿದೆ ಎಂದರು.
ಮಹಿಳೆಯರನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಉತ್ತೇಜನ ನೀಡುವ ವಿವಿಧ ಸ್ಪರ್ಧೆ ಆಯೋಜಿಸಿದ ಸಂಘಟಕರ ಕಾರ್ಯ ಇಲ್ಲಿ ಪ್ರಶಂಸನೀಯವಾಗಿದೆ ಎಂದು ಬಣ್ಣಿಸಿದರು.
ಪ್ರೀತಿ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಮಾತನಾಡಿ, ದಸರಾ ಸಂಭ್ರಮದ ಜೊತೆಗೆ ಅಮ್ಮನವರಿಗೆ ವಿಶೇಷ ಪೂಜೆ, ಪುನಸ್ಕಾರ ಮಾಡುವುದರ ಮೂಲಕ ವಿವಿಧ ಧಾರ್ಮಿಕ, ಸಾಂಸ್ಕøತಿಕ, ಸ್ಪರ್ಧೆಗಳನ್ನು ಆಯೋಜಿಸಿ ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರ್ಯ ಮೊದಲಿನಿಂದಲೂ ಮಾಡಿಕೊಂಡು ಬರಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ತೋರಿದ ಎಲ್ಲ ಸ್ಪರ್ಧಾಳುಗಳಿಗೆ ಕೃತಜ್ಞತೆಗಳನ್ನು ತಿಳಿಸಿದರು.
ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಜಾತ್ರಾ ಕಮೀಟಿ ಅಧ್ಯಕ್ಷ ರಾಜು ಕುಡಸೋಮಣ್ಣವರ, ರಾಯಣ್ಣ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಬಿ.ಬಿ.ಗಣಾಚಾರಿ, ಕುಮಾರ ರೇಶ್ಮಿ, ರಾಜು ಬಡಿಗೇರ, ನಿವೃತ್ತ ಯೋಧರಾದ ಈರಪ್ಪ ಕಾಡೇಶನವರ, ಆನಂದ ತೋಟಗಿ, ಮಂಜುನಾಥ ಜ್ಯೋತಿ, ಬಸವರಾಜ ಕಟ್ಟಿಮನಿ, ರವಿ ವಣ್ಣೂರ, ಈರಣ್ಣಾ ಮೇಲಿಕಟ್ಟಿ, ಸಂತೋಷ ಹುಣಶೀಕಟ್ಟಿ, ಆನಂದ ಬಡಿಗೇರ, ಅಜಯ ಪಟ್ಟಣಶೆಟ್ಟಿ, ಬಸಪ್ಪ ಬಾಯವ್ವಗೋಳ, ಪ್ರಶಾಂತ ಹಿರೇಮಠ ಇದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಯುವತಿಯರು, ಗೃಹಿಣಿಯರು, ಸ್ಪರ್ಧೆಯಲ್ಲಿ ಪಾಲ್ಗೊಂಡು ಅರಳಿಸಿದ ರಂಗೋಲಿ ವೀಕ್ಷಕರ ಗಮನ ಸೆಳೆದವು.
Post a Comment