ಅಪಾರ್ಟ್‍ಮೆಂಟ್‍ನಲ್ಲಿ 20 ಪ್ರಮುಖ ಆರೋಗ್ಯ ಸೇವೆ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿರುವ ಅಪಾರ್ಟ್‍ಮೆಂಟ್‍ಗಳಿಗೆ ವೈದ್ಯಕೀಯ ಸವಲತ್ತು ಪಡೆದುಕೊಳ್ಳಲು ಸಹಕಾರಿಯಾಗುವ ಐಎಚ್‍ಎಲ್ ಕೇರ್, ಇಂಡಿಯಾ ಹೆಲ್ತ್ ಲಿಂಕ್‍ನ ಸ್ಮಾರ್ಟ್ ಡಿವೈಸ್ ಎಟಿಎಂ ಗಾತ್ರದ ಎಚ್‍ಪಾಡ್ ಅನ್ನು ನಗರದ ಪೂರ್ವ ಹೈಲ್ಯಾಂಡ್ ಅಪಾರ್ಟ್‍ಮೆಂಟ್‍ನಲ್ಲಿ ಅಳವಡಿಸಲಾಗಿದೆ.
ಈ ವೈದ್ಯಕೀಯ ವ್ಯವಸ್ಥೆ ದೇಶದಲ್ಲಿಯೇ ಪ್ರಥಮವಾಗಿ ಅಳವಡಿಸಿದ ಮಹಾನಗರ ಬೆಂಗಳೂರು ಆಗಿದ್ದು ಇಸಿಜಿ, ಬಿಪಿ, ಬಿಎಂಐ ನಂತಹ ಹಲವಾರು ಆರೋಗ್ಯ ತಪಾಸಣೆಗಳಿಗೆ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಓಡಾಡುವುದು ಇದರಿಂದ ತಪ್ಪಲಿದೆ.
ಈ ಯಂತ್ರಕ್ಕೆ ಚಾಲನೆ ನೀಡಿದ ಪೂರ್ವ ಅಪಾರ್ಪ್‍ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ವಿಕ್ರಮ್ ಮಾತನಾಡಿ, ಹೊರವಲಯದಲ್ಲಿರುವ ಈ ಅಪಾರ್ಟ್‍ಮೆಂಟ್‍ನಿಂದ ಹೋಗಿ ಪ್ರಾಥಮಿಕ ಹಂತದ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ತೊಂದರೆಯಾಗಿತ್ತು. ಎಚ್‍ಪಾಡ್ ಮೂಲಕ ನಾವು ಪ್ರತಿ ಬಾರಿ ಆರೋಗ್ಯ ತಪಾಸಣೆಯ ಪ್ರಮುಖ ಪರೀಕ್ಷೆಗಳನ್ನು ಇಲ್ಲಿಯೇ ಪೂರೈಸಬಹುದು. ಅಗತ್ಯವಿದ್ದಲ್ಲಿ ಟೆಲಿಮೆಡಿಸನ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು ಎಂದರು.
ಈ ವ್ಯವಸ್ಥೆ ಅಳವಡಿಕೆಯಿಂದ ಅಪಾರ್ಟ್‍ಮೆಂಟ್‍ನಲ್ಲಿರುವ ಸುಮಾರು 4 ಸಾವಿರಕ್ಕೂ ಹೆಚ್ಚು ಜನರು ಸುಲಭವಾಗಿ ಆರೋಗ್ಯ ಪರೀಕ್ಷೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಇಂಡಿಯಾ ಹೆಲ್ತ್ ಲಿಂಕ್‍ನ ಸಿಇಓ ಡಾ ಸತ್ಯೇಂದರ್ ಗೋಯೆಲ್ ಮಾತನಾಡಿ, ಅರ್ಥಪೂರ್ಣವಾದ ಆರೈಕೆÀ ವ್ಯವಸ್ಥೆ ಸೃಷ್ಟಿಸಲು ಕಂಪನಿಯು ಕೆಲಸ ಮಾಡುತ್ತಿದೆ. ನಿವಾಸಿಗಳಿಗೆ ಯಾವುದೇ ತೊಂದರೆಯಿಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡುವುದರ ಜತೆಗೆ ಭಾರತದಲ್ಲಿ 'ಕ್ಷೇಮ ಆರೈಕೆ ಸಂಸ್ಕøತಿ' ಹರಡಲು ಸಹಾಯ ಮಾಡುತ್ತಿದೆ ಎಂದು ನುಡಿದರು.
ರಕ್ತದೊತ್ತಡ, ದೇಹದ ತಾಪಮಾನ, ದೇಹದ ದ್ರವ್ಯರಾಶಿ ಸಂಯೋಜನೆ, ಪಲ್ಸ್, ಎಸ್‍ಪಿಒ2 ಮತ್ತು ಇಸಿಜಿ ಯಂತಹ 20 ಪ್ರಮುಖ ನಿಯತಾಂಕಗಳನ್ನು ಪರೀಕ್ಷಿಸುವ ಸಾಮಥ್ರ್ಯ ಎಚ್‍ಪಾಡ್‍ಗಿದೆ. ಸಾಫ್ಟ್ ವೇರ್ ಪ್ಲಾಟ್‍ಫಾರ್ಮ್ ಕಿಯೋಸ್ಕ್ ಮೂಲಕ ರೋಗಿಗಳನ್ನು ನೆರೆಹೊರೆಯ ಪ್ರಮುಖ ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಪ್ರಯೋಗಾಲಯಗಳಿಗೆ ತಕ್ಷಣ ಸಂಪರ್ಕಿಸುವ ಸೌಲಭ್ಯವನ್ನು ಒಳಗೊಂಡಿದೆ ಎಂದು ವಿವರಿಸಿದರು.
ಐಎಚ್‍ಎಲ್ ಕೇರ್ ಪ್ಲಾಟ್‍ಫಾರ್ಮ್ ಗೃಹ ಆರೋಗ್ಯ ಸೇವೆಗಳನ್ನು ನಿವಾಸಿಗಳ ಮನೆಬಾಗಿಲಿಗೆ ತರುತ್ತದೆ. ಇಂಡಿಯಾ ಹೆಲ್ತ್ ಲಿಂಕ್‍ನಿಂದ ರೂಪುಗೊಂಡಿರುವ ಇದು ಸುಲಭ ಪ್ರವೇಶದ ಹಾರ್ಡ್‍ವೇರ್ ಮತ್ತು ಎಪಿಐ ಮೊದಲ ಇಂಟಿಗ್ರೇಟೆಡ್ ಸಾಫ್ಟ್ ವೇರ್ ಸಂಯೋಜನೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಇಂಡಿಯಾ ಹೆಲ್ತ್ ಲಿಂಕ್‍ನ ಸೇಲ್ಸ್ ಮ್ಯಾನೇಜರ್ ಉಮೇಶ್ ದೊಡ್ಡವಾಡ ಮಾತನಾಡಿ, ಈ ಪ್ಲಾಟ್‍ಫಾರ್ಮ್ ವೈದ್ಯರು, ಫಿಟ್ನೆಸ್ ಕನ್ಸಲ್ಟೆಂಟ್‍ಗಳು ಮತ್ತು ನೆರೆಹೊರೆಯ ಆರೋಗ್ಯ ಪಾಲುದಾರರ ಸಹಯೋಗದಲ್ಲಿ ಮನೆ ಬಾಗಿಲಲ್ಲಿ ಪ್ರಯೋಗಾಲಯ ಮತ್ತು ಫಾರ್ಮಸಿ ಸೇವೆಗಳೊಂದಿಗೆ ತ್ವರಿತ ಸಮಾಲೋಚನೆ ನೀಡುತ್ತದೆ ಎಂದು ತಿಳಿಸಿದರು.
ಯೋಗ, ಜುಂಬಾ, ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆಗಳಂತಹ ಆಧುನಿಕ ಚಿಕಿತ್ಸೆಗಳು ಹಾಗೂ ಆಧುನಿಕ ಆರೋಗ್ಯ ಔಷಧಿಗಳೊಂದಿಗೆ ನಿವಾಸಿಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಆಯ್ಕೆಗಳನ್ನು ಒದಗಿಸುತ್ತದೆ. ಸಮುದಾಯವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿಡಲು ಆರೋಗ್ಯ ಪಾಲುದಾರರಿಗೆ ಬೆಂಬಲವಾಗಿ ಆರೋಗ್ಯ ಕಾರ್ಯಕ್ರಮಗಳನ್ನು ಸಕ್ರಿಯಗೊಳಿಸಲು ಸಮುದಾಯ ಆರೋಗ್ಯದ ಒಳನೋಟಗಳನ್ನು ನೀಡುತ್ತದೆ ಎಂದು ವಿವರಿಸಿದರು.
Post a Comment