ಅ. 11ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟಣೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ - kittur

ಕಿತ್ತೂರು ಉತ್ಸವ : 2 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜನೆ - click...

 ಕಿತ್ತೂರು ಉತ್ಸವದ ಉಪಸಮಿತಿ ಸಭೆಯ ವಿಡಿಯೋ ನೋಡಿ...

ಅ. 11ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ  ಇಲ್ಲಿಯ ಕಲ್ಮಠದ ಸಭಾಭವನದಲ್ಲಿ ಅ. 11 ರಂದು ಮಧ್ಯಾಹ್ನ 1ಕ್ಕೆ ಚಾಲನೆ ನೀಡಲಾಗುವುದು.

ಶಾಸಕ ಮಹಾಂತೇಶ ದೊಡ್ಡಗೌಡರ ಅಭಿಯಾನಕ್ಕೆ ಚಾಲನೆ ನೀಡುವರು. 

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮತ್ತು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯ ವಹಿಸುವರು.

ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಸಿಪಿಐ ಮಂಜುನಾಥ ಕುಸುಗಲ್,  ಪಿಎಸ್‍ಐ ದೇವರಾಜ ಉಳ್ಳಾಗಡ್ಡಿ, ಕೆಎನ್‍ವಿವಿ ಸಂಘದ ಚೇರಮನ್ ನಿಂಗಪ್ಪ ತಡಕೋಡ, ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಗ್ರಾಮೀಣ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಹನುಮಂತ ಕೊಟಬಾಗಿ, ಬಾಬಾಸಾಹೇಬ ಪಾಟೀಲ. ಹಬೀಬ ಶಿಲೇದಾರ, ಉಳವಪ್ಪ ಉಳ್ಳೇಗಡ್ಡಿ, ಹನುಮಂತ ಲಂಗೋಟಿ, ಅರುಣಕುಮಾರ ಬಿಕ್ಕಣ್ಣವರ, ಕಿರಣ ವಾಳದ, ಡಾ. ಶ್ರೀಕಾಂತ ದಳವಾಯಿ   ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸಣ್ಣವರ, ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಿಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


0/Post a Comment/Comments