ವಿಜಯನಗರ ಜಿಲ್ಲಾ ಶಿಳ್ಳೇಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ-Vijayanagara

 


ವಿಜಯನಗರ ಜಿಲ್ಲಾ ಶಿಳ್ಳೇಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ-

ವಿಜಯನಗರ ಜಿಲ್ಲೆ ಶಿಳ್ಳೇಕ್ಯಾತರ ನೂತನ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು,ಕೂಡ್ಲಿಗಿ ಪಟ್ಟಣದ ಪ್ರವಾಸಿಮಂದಿರದಲ್ಲಿ  ರಾಜ್ಯ ಮುಖಂಡರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ನೂತನ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ರಾಜ್ಯಾಧ್ಯಕ್ಷ ಸಣ್ಣ ವೀರಣ್ಣ ದೊಡ್ಮನಿ ಮಾತನಾಡಿದರು,ಶರಣೆ ಆಯ್ದಕ್ಕಿ ಲಕ್ಕಮ್ಮಳ ತರ ಸಮುದಾಯದ ಮಹಿಳೆಯರು ಸಂಘಟಿತರಾಗಿ ಸಮುದಾಯಕ್ಕಾಗಿ ಶ್ರಮಿಸಬೇಕಿದೆ.
ಶೈಕ್ಷಣಿಕ ಪ್ರಗತಿ ಹಾಗೂ ಸ್ವಾವಲಂಬಿ ಜೀವನ ಕ್ಕೆ ಹೆಚ್ಚು ಹೊತ್ತು ಕೊಡಬೇಕು,ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ  ಸದುಪಯೋಗ ಪಡೆದು ಸರ್ವತೋಮುಖ ಅಭಿವೃದ್ದಿ ಹೊಂದಿ ನುಖ್ಯವಾಹಿನಿಯಲ್ಲಿ ಗರುತಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ವೇದಿಕೆಯಲ್ಲಿದ್ದ ರಾಜ್ಯ ಮಂಡಳಿಯ ಪ್ರಮುಖರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು,
ನಂತರ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಜರುಗಿತು.

ಪದಾದಿಕಾರಿಗಳ ಆಯ್ಕೆ-
ವಿಜಯನಗರ ಜಿಲ್ಲಾಧ್ಯಕ್ಷರಾಗಿ ಕೂಡ್ಲಿಗಿ ಪಟ್ಟಣದ ಬಿದಿಬದಿ ವ್ಯಾಪಾರಿ ಶ್ರೀಮತಿ ಗೌರಮ್ಮ ಮಹಂತೇಶ ಸಿಂದೆರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷೆ ಹನುಮಕ್ಕ, ಪ್ರಧಾನಕಾರ್ಯದರ್ಶಿ ಅಲಿಗಿಲಿವಾಡ ರೂಪ,ಸಂಘಟನಾ ಕಾರ್ಯದರ್ಶಿ ಕೊಟ್ಟೂರು ಕವಿತಾ, ಕೋಶಾಧ್ಯಕ್ಷರು ನಾಗರಕಟ್ಟೆ ಮಹಾದೇವಮ್ಮ,ದೀಪಾ,ಗಾಳೆಮ್ಮಗುಡಿ ಉಮಾದೇವಿ ಅವರನ್ನು ಸಭೆಯಲ್ಲಿ ಅಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರು ಮಹೇಂದ್ರ ರಾವ್ ಸಾಸನಿಕ್ ರವರನ್ನು ನೇಮಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಶಿಳ್ಳೇಕ್ಯಾತ ಸ್ವಾಮೀಜಿಗಳಾದ, ಶ್ರೀಕಲ್ಲಿನಾಥ ಮಹಾಸ್ವಾಮಿ ಭೀಮಘಡ ಹಾಗೂ ಬಡೇಲಡಕು ಶ್ರೀವಸಂತಪ್ಪತಾತ ರವು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಧ್ಯಕ್ಷರಾದ ಡಾ"ಸಣ್ಣ ವೀರಣ್ಣ ದೊಡ್ಮನಿ,ರಾಜ್ಯ ಕಾರ್ಯದರ್ಶಿ ಗಂಗೂರು ಮತ್ತಣ್ಣವಾಯ್, ರಾಜ್ಯಉಪಾಧ್ಯಕ್ಷರಾದ ಸುರೇಶ್ ವಾಯ್ ಕಟ್ಟಿಮನಿ,ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಶಿಳ್ಳೆಕ್ಯಾತರ ,ರಾಜ್ಯ ಸಂಚಾಲಕ ವಿಲಾಸಕುಮಾರ ಜಿ.ಶಿಂಧೆ,ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶೈಲಾ ಸೀತಾರಾಂ ಪಾಚಂಗೆ ಮತ್ತಿರರು ವೇದಿಕೆಯಲ್ಲಿದ್ದರು. ತೊಗಲುಗೊಂಬೆ ಕಲಾವಿದರಾದ ಬಡೇಲಡಕು ತಿಪ್ಪೇಸ್ವಾಮಿ ಹಾಗೂ ತಬಲಸಾತಿ ವೆಂಕಟೇಶ್ ಕಟ್ಟಿಮನಿ ಪ್ರಾರ್ಥಿಸಿದರು,ಮುತ್ತಣ್ಣ ವಾಯ್ ಕಟ್ಟಿಮನಿ ನಿರೂಪಿಸಿದರು,ಕೂಡ್ಲಿಗಿ ಮಂಜು ಸಿಂದೆ ಸ್ವಾಗತಿಸಿದರು, ಬಡೇಲಡಕು ವಿರುಪಾಕ್ಷಪ್ಪ ವಂದಿಸಿದರು.


0/Post a Comment/Comments