ಬಿಜೆಪಿ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ - M K Hubballi


 ಹಿರಿಯರ ತ್ಯಾಗದಿಂದ ಬಿಜೆಪಿಗೆ ಅಧಿಕಾರ : ಜಗದೀಶ ಹಿರೇಮನಿ ಅಭಿಮತ - click...


ಬಿಜೆಪಿ ಎಸ್‍ಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಚೇತನ ರಾಜೀನಾಮೆ

ಪ್ರೆಸ್‍ಕ್ಲಬ್ ವಾರ್ತೆ

ಎಂ. ಕೆ. ಹುಬಳ್ಳಿ: ಸ್ಥಳೀಯ ಕೆಲ ಮುಖಂಡರು ಪಕ್ಷದೊಳಗೆ ಉಸಿರು ಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದರಿಂದ ಬಿಜೆಪಿ ಕಿತ್ತೂರು ಮಂಡಳದ ಪರಿಶಿಷ್ಟ ಜಾತಿ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಚೇತನ ದೇಮಟ್ಟಿ ಪ್ರಕಟಿಸಿದರು. 

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೆಲ ಮುಖಂಡರ ವರ್ತನೆ ಸಹಿಸಿಕೊಳ್ಳಲು ಅಸಾಧ್ಯವಾಗಿತ್ತು. ಇಂಥ ಮುಖಂಡರಿಂದ ಪಕ್ಷವನ್ನು ಹಿರಿಯರು ಬಚಾವ್ ಮಾಡದಿದ್ದರೆ, ಕ್ಷೇತ್ರದಲ್ಲಿ ಹಿಂದಿದ್ದ ದುಃಸ್ಥಿಥಿಯನ್ನು ಪಕ್ಷವು  ತಲುಪುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದರು.

ರಾಜಕೀಯ ಜೀವನ ಆರಂಭ ಮಾಡಿದಾಗ ಮೊದಲು ಸೇರಿದ್ದೇ ನಾನು ಭಾರತೀಯ ಜನತಾ ಪಕ್ಷ. ವೈಯಕ್ತಿಕವಾಗಿ ಪಕ್ಷದ ಮೇಲೆ ಈಗಲೂ ನನಗೆ ಅಪಾರವಾದ ಕಾಳಜಿ ಮತ್ತು ಪ್ರೀತಿಯಿದೆ. ಜನಸಾಮಾನ್ಯರ ಜೊತೆಗೆ ಬೆರೆತು ಅವರ ಕಷ್ಟ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುವ ಗುಣ ನನ್ನ ರಕ್ತದಲ್ಲಿ ಬೆರೆತಿದೆ. ಇದನ್ನು ಬೇರೆ ರೀತಿಯಲ್ಲಿ ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ. ಕೆಲವರ ಮಾತು ಕೇಳಿದ ಪಕ್ಷದ ಹಿರಿಯರು ನೀಡಬೇಕಾದ ಗೌರವವನ್ನೂ ನೀಡುತ್ತಿಲ್ಲ. ಸಮಯ ಮತ್ತು ಸಂದರ್ಭದಲ್ಲಿ    ನನ್ನನ್ನು ಉಪಯೋಗಿಸುವುದನ್ನು ಮಾತ್ರ ಬಿಟ್ಟಿಲ್ಲ ಎಂದು ಅವರು ದೂರಿದರು. 

ಕೆಲವರ ಧೋರಣೆಯಿಂದ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ.  ನನ್ನ ಭಾವನೆಗಳಿಗೆ ಬೆಲೆ ಸಿಗುತ್ತಿಲ್ಲ. ಇದನ್ನು ನನ್ನ ಅಭಿಮಾನಿಗಳು ಮತ್ತು ಹಿತಚಿಂತಕರಲ್ಲಿ ಚರ್ಚೆ ಮಾಡಿ ಅನಿವಾರ್ಯವಾಗಿ ರಾಜೀನಾಮೆ ತೀರ್ಮಾನಕ್ಕೆ ಬಂದಿರುವೆ ಎಂದು ಅವರು ತಮ್ಮ ರಾಜೀನಾಮೆಯನ್ನು ಸಮರ್ಥಿಸಿಕೊಂಡರು. 



0/Post a Comment/Comments