ಸದಸ್ಯ ಮಾಜಿ ಆದರೂ ನಿಲ್ಲದ ಮಾದರಿ ಸೇವೆ- kittur ಮೆಚ್ಚುಗೆಗೆ ಅರ್ಹ; ಕಿರಣ ಕೈಂಕರ್ಯ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಚುನಾಯಿತ ಜನಪ್ರತಿನಿಧಿ ತಮ್ಮ ಸೇವಾವಧಿ ಮುಗಿದರೆ ಸಾಕು ತೆರೆಮರೆಗೆ ಸರಿಯುವವರೆ ಹೆಚ್ಚಾಗಿದ್ದಾರೆ. ಆದರೆ ಅವಧಿ ಮುಗಿದಿದ್ದರೆ ಜನರ ಕುಂದು, ಕೊರತೆ ಆಲಿಸಿ ಅವುಗಳ ನಿವಾರಣೆಗೆ ಕೆಲಸವನ್ನು ಎಂದಿನಂತೆ ಮುಂದುವರೆಸಿದ್ದಾರೆ ಇಲ್ಲೊಬ್ಬರು ಮಾಜಿ ಪಟ್ಟಣ ಪಂಚಾಯ್ತಿ ಸದಸ್ಯರು.
ಅವರ ಹೆಸರು ಕಿರಣ ವಾಳದ. ಅಧಿಕಾರ ಅವಧಿ ಮುಗಿಯುವ ಮೊದಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಜನಪ್ರತಿನಿಧಿ ಇದ್ದಾಗ ಮಾಡಿದ ಜನೋಪಯೋಗಿ ಕೆಲಸವನ್ನು ಈಗಲೂ ಮುಂದುವರೆಸಿ ಮೆಚ್ಚುಗೆ ಗಳಿಸುತ್ತಿದ್ದಾರೆ.


ಪಟ್ಟಣದ ಸ್ವಚ್ಛತೆಗೆ ಗಮನದಲ್ಲಿಟ್ಟುಕೊಂಡು ಹೆಚ್ಚು ಕಾರ್ಯನಿರ್ವಹಿಸುವ ಅವರು, ಗುರುವಾರ ನಿಚ್ಚಣಕಿ ಮಾರ್ಗದಲ್ಲಿ ಬರುವ ಸೋಮವಾರ ಪೇಟೆಯ ಕೊನೆಯ ಭಾಗವಾಗಿರುವ ಅಂಗನವಾಡಿ ಬಳಿ ಚರಂಡಿ ಸ್ವಚ್ಛತೆಯನ್ನು ಮಾಡಿಸಿದರು.
ಪೌರ ಕಾರ್ಮಿಕರ ಜೊತೆ ಬೆರೆತು ಅವರು ಕೆಲಸ ಮಾಡಿಸಿದ್ದು ಅನೇಕರ ಮೆಚ್ಚುಗೆಗೂ ಪಾತ್ರವಾಯಿತು.