ಒಣ ಮೆಣಸಿನಕಾಯಿ ಬೆಳೆಯಬಾರದೇಕೆ, ಅಂದಿದ್ದರಂತೆ ಅವರು! - kittur

ಭದ್ರಕೋಟೆ ಭೇದಿಸಿ ಹೆದ್ದಾರಿಗೆ ನುಗ್ಗಿದ ಹೋರಾಟಗಾರರು! - click...

ಒಣ ಮೆಣಸಿನಕಾಯಿ ಬೆಳೆಯಬಾರದೇಕೆ?
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಹಸಿ ಮೆಣಸಿನಕಾಯಿಗೆ ಧಾರಣಿ ಕಡಿಮೆ ಇರುತ್ತದೆ. ಒಣ ಮೆಣಸಿನಕಾಯಿಗೆ ಒಳ್ಳೆಯ ದರ ಇರುತ್ತದೆ. ಹಾಗಾದರೆ ಒಣ ಮೆಣಸಿನಕಾಯಿ  ಏಕೆ ಬೆಳೆಯಬಾರದು, ಭಾರತೀಯ ರೈತರು ಎಂಥ ದಡ್ಡರು' ಎಂದು ಅವರು ಅಂದಿದ್ದರಂತೆ..
ಈ ಮಾತನ್ನು ನೆನಪಿಸಿದವರು ಬೃಹತ್ ಕೈಗಾರಿಕೆ  ಸಚಿವ ಮುರುಗೇಶ ನಿರಾಣಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಗೆ ಹೇಳಿದ್ದನ್ನು ಸೋಮವಾರ ಡೊಂಬರಕೊಪ್ಪ  ಪ್ರವಾಸಿ ಮಂದಿರದಲ್ಲಿ   ನಡೆದ ಸುದ್ದಿಗೋಷ್ಟಿಯಲ್ಲಿ  ಅವರು ಸ್ಮರಿಸಿದರು.
ಯಾವ ಬೇಳೆ ಹೇಗೆ ಬೆಳೆಯುತ್ತದೆ ಎಂಬುದು ಗೊತ್ತಿರುವುದಿಲ್ಲ. ಕಬ್ಬು ಇಷ್ಟೇ ಇರುತ್ತದೆ. ಬೆಲ್ಲದ ಪೆಂಟಿ 30 ಕೆಜಿ ಇರುತ್ತದೆ. ಹೇಗೆಂದು ಕೇಳುವ ನಮ್ಮವರಿಗೆ  ಮೂಲ ಜ್ಞಾನ ನೀಡಬೇಕಾದ ಕಾಲ ಬಂದಿದೆ ಎಂದು ಅವರು ವಿಶ್ಲೇಷಿಸಿದರು.
ವಿಮಾನ ನಿಲ್ದಾಣಕ್ಕೆ ಸೂಕ್ತ ಜಾಗೆ


ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲು  ಕಿತ್ತೂರು  ಸೂಕ್ತ ಜಾಗೆಯಾಗಿದೆ. ಇಲ್ಲಿ ನಿಲ್ದಾಣ ಆಗುವುದರಿಂದ ಈ ಭಾಗವು ಒಳ್ಳೆಯ ಬೆಳವಣಿಗೆಯಾಗಬಲ್ಲುದು ಎಂದು ಸಚಿವ ನಿರಾಣಿ ಅಭಿಪ್ರಾಯಪಟ್ಟರು.
ಅನಂತರ ಇಲ್ಲಿಯ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿದ್ದ ಕೈಗಾರಿಕೆಯೊಂದಕ್ಕೆ ಭೇಟಿ ನೀಡಿ ಉದ್ಯಮಿಯೊಂದಿಗೆ  ಮಾಹಿತಿ ಪಡೆದರು.


ಶಾಸಕ ಮಹಾಂತೇಶ ದೊಡ್ಡಗೌಡರ, ಬಸನಗೌಡ ಸಿದ್ರಾಮನಿ, ಚನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಶ್ರೀಕರ ಕುಲಕರ್ಣಿ, ಅಪ್ಪಣ್ಣ ಪಾಗಾದ, ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳೇಗಡ್ಡಿ, ಉಮಾದೇವಿ ಬಿಕ್ಕಣ್ಣವರ, ಸರಸ್ವತಿ ಹೈಬತ್ತಿ, ಕಿರಣ ಪಾಟೀಲ, ಕಿರಣ ವಾಳದ, ಕಂದಾಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
 

0/Post a Comment/Comments