ಕ್ರಾಂತಿ ನೆಲದಿಂದ ಕೇಂದ್ರ ಸರ್ಕಾರಕ್ಕೆ ರಣವೀಳ್ಯೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಾನೂನು ತಿದ್ದುಪಡಿ ಮಾಡಿ ಅಮಾಯಕ ರೈತರ ಮೇಲೆ ಗದಾಪ್ರಹಾರ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರೈತಪರ ಹೋರಾಟಗಾರ ಹಾಗೂ ಹಿರಿಯ ನ್ಯಾಯವಾದಿ ಪಿ. ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಹೋರಾಟದ ನೆಲದಿಂದ ಮೋದಿ ಸರ್ಕಾರ ಕಿತ್ತೊಗೆಯಲು ರಣವೀಳ್ಯೆ ನೀಡಿದ್ದೇವೆ’ ಎಂದು ಘೋಷಿಸಿದರು.
ಅಖಿಲ ಭಾರತ ಕಿಸಾನ್ ಸಂಯುಕ್ತ ಯೂನಿಯನ್ ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಬೆಂಬಲಿಸಿ ಇಲ್ಲಿಯ ರಾಣಿ ಚನ್ನಮ್ಮ ವರ್ತುಲದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ಇಲ್ಲಿಯವರೆಗೆ 1600 ಕಾನೂನುಗಳನ್ನು ತಿದ್ದುಪಡಿ ಮಾಡಿ ಕೃಷಿಕರು, ಕೃಷಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಬದುಕು ಸತ್ಯಾನಾಶ ಮಾಡಲು ಹೊರಟಿದೆ. ಇದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ’ ಎಂದು ಗುಡುಗಿದರು.
‘6.50 ಲಕ್ಷ ಹಳ್ಳಿಗಳಿಗೆ ಡ್ರೋನ್ ಮೂಲಕ ಸರ್ವೇ ಮಾಡಿಸಿ ನಕ್ಷೆ ಸಿದ್ಧಪಡಿಸಿ ರೈತರಿಗೆ ಹಕ್ಕನ್ನು ನೀಡಲಾಗಿದೆ ಎಂದು ನ್ಯೂಯಾರ್ಕ್‍ನಲ್ಲಿ ಪ್ರಧಾನಿ ಮೋದಿ ಸುಳ್ಳು ಭಾಷಣ ಮಾಡಿದ್ದಾರೆ. ಇದನ್ನು ನೋಡಿದರೆ ಆತ ಮಹಾಸುಳ್ಳುಗಾರ ಎನಿಸುತ್ತದೆ. ನಿಮ್ಮೂರಿಗೇನಾದರೂ ಡ್ರೋನ್ ಕ್ಯಾಮೆರಾ ಸರ್ವೇಗೆ ಬಂದಿತ್ತೇ’ ಎಂದು ನೆರೆದವರನ್ನು ಪ್ರಶ್ನಿಸಿದಾಗ ಚಪ್ಪಾಳೆಯೇ ಅವರ ಉತ್ತರವಾಗಿತ್ತು.

‘ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಖಲಿಸ್ತಾನಿಗಳು, ಅವರೆಲ್ಲ ದೇಶದ್ರೋಹಿಗಳು ಎನ್ನುವ ಸರ್ಕಾರ, 80 ಕೋಟಿ ರೈತರು ದೇಶದ 140ಕೋಟಿ ಜನರಿಗೆ ಅನ್ನ ಹಾಕುತ್ತಿದ್ದಾರೆ. ಹಾಗಾದರೆ ನಾವು ದೇಶದ್ರೋಹಿಗಳಾ’ ಎಂದು ತರಾಟೆಗೆ ತೆಗೆದುಕೊಂಡರು.
‘ಬಾಬಾಗೌಡರು ಇಂದು ನಮ್ಮ ಮಧ್ಯೆ ಇರಬೇಕಾಗಿತ್ತು’ ಎಂದು ಸ್ಮರಿಸಿದ ಅವರು, ‘ಒಗ್ಗಟ್ಟಾಗಿ ರೈತರು ಹೋರಾಟ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ’ ಎಂದರು.
ಮುಖಂಡ ಶಿವಾನಂದ ಹೊಳೆಹಡಗಲಿ ಮಾತನಾಡಿ ‘ರೈತರು ತಮ್ಮ ಬೇಡಿಕೆಗಾಗಿ ಆಗ್ರಹಿಸಿ ಮಳೆ, ಗಾಳಿ, ಚಳಿ ಲೆಕ್ಕಿಸದೇ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರಲ್ಲಿ 630 ರೈತರು ಹುತಾತ್ಮರಾಗಿದ್ದಾರೆ. ಅವರನ್ನು ಮಾತನಾಡಿಸುವ ಕನಿಷ್ಠ ಸೌಜನ್ಯವಿಲ್ಲದ ಮೋದಿಗೆ ಮಾನವೀಯತೆ ಇದೆಯೇ’ ಖಾರವಾಗಿ ಪ್ರಶ್ನಿಸಿದರು.
‘ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ನಮ್ಮ ಮಕ್ಕಳು ಭಿಕಾರಿ ಆಗಬಾರದು’ ಎಂದ ಅವರು, ‘ಈ ಹೋರಾಟಕ್ಕೆ ವೈದ್ಯರು, ಇಂಜನೀಯರ್‍ಗಳು, ಉಪನ್ಯಾಸಕರು ಹಾಗೂ ವಕೀಲರು ಬೆಂಬಲ ಸೂಚಿಸಿದ್ದಾರೆ’ ಎಂದರು.
ಕುಲವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಮಾತನಾಡಿ ‘ಕ್ವಿಂಟಲ್ ಕಬ್ಬಿಗೆ ಕೇವಲ ರೂ. 5 ಹೆಚ್ಚಿಸಿದ್ದಾರೆ. ಟನ್ ಕಬ್ಬಿಗೆ ರೂ. 50 ಹೆಚ್ಚಿಸಿದಂತೆ ಆಯ್ತು. ಸರ್ಕಾರಕ್ಕೆ ನಾಚಿಕೆ ಆಗಬೇಕು’ ಎಂದು ಟೀಕಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಸೋಮುಗುದ್ದಿ ರಂಗಸ್ವಾಮಿ ಮಾತನಾಡಿ, ‘ಹೋರಾಟ ರೈತರ ಮೂಲಭೂತ ಹಕ್ಕು. ಇದನ್ನು ಹತ್ತಿಕ್ಕಿದವರಿಗೆ ಉಳಿಗಾಲವಿಲ್ಲ. ಇಲ್ಲಿ ಸಮಸ್ಯೆಗಳಿಂದಾಗಿ ಜನ ಸಾಯುತ್ತಿದ್ದರೆ ರೂ. 4600 ಕೋಟಿ ಕೊಟ್ಟು ಮೋದಿ ವಿಮಾನ ಖರೀದಿ ಮಾಡುತ್ತಿದ್ದಾರೆ’ ಎಂದರು.
Post a Comment