ಹಿರಿಯರ ತ್ಯಾಗದಿಂದ ಬಿಜೆಪಿಗೆ ಅಧಿಕಾರ : ಜಗದೀಶ ಹಿರೇಮನಿ ಅಭಿಮತ - kittur

 ‘ಒಕ್ಕಟ್ಟಿನಿಂದ ಸಂಘಟನೆಗೆ ಬಲ ತುಂಬಿ’ - ಬಾಬಾಸಾಹೇಬ ಪಾಟೀಲ ಸಲಹೆ - click...


ಹಿರಿಯರ ತ್ಯಾಗದಿಂದ ಬಿಜೆಪಿಗೆ ಅಧಿಕಾರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಪಂಡಿತ ದೀನದಯಾಳ ಉಪಾಧ್ಯಾಯ, ಶ್ಯಾಮ್‍ಪ್ರಸಾದ್ ಮುಖರ್ಜಿ ಅವರಂಥ ಹಿರಿಯರ ಸಂಘಟನೆ ಮತ್ತು ಪರಿಶ್ರಮದ ಪರಿಣಾಮವಾಗಿ ಈಗ ಬಿಜೆಪಿ ಅಧಿಕಾರದಲ್ಲಿದೆ ಎಂದು ಸೇವೆ ಮತ್ತು ಸಮರ್ಪಣಾ ಅಭಿಯಾನದ ಸಂಚಾಲಕ ಹಾಗೂ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಜಗದೀಶ ಹಿರೇಮನಿ ಅಭಿಪ್ರಾಯಪಟ್ಟರು.

ನಿಚ್ಚಣಕಿ ಮಾರ್ಗದಲ್ಲಿರುವ ಇಲ್ಲಿಯ ಬಸವೇಶ್ವರ ಕಾಲೊನಿಯ ಬಸವ ಉದ್ಯಾನದಲ್ಲಿ ಬಿಜೆಪಿ ಮಂಡಳ ವತಿಯಿಂದ ದೀನದಯಾಳ ಉಪಾಧ್ಯಾಯ ಅವರ 105ನೇ ಜನ್ಮದಿನಾಚರಣೆ   ಅಂಗವಾಗಿ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅವರ ಕಾಲದಲ್ಲಿ ಅಲ್ಪ ಪ್ರಮಾಣದಲಿದ್ದ  ಸಂಘಟನೆ ಈಗ ದೈತ್ಯಾಕಾರವಾಗಿ ಬೆಳೆದು ನಿಂತಿದೆ. ದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಸಂಘಟನೆಗಾಗಿ ಪರಿಶ್ರಮಪಟ್ಟವರ ಸ್ಮರಣೆ ಅಗತ್ಯವಾಗಿದೆ. ಅವರ ಪರಿಶ್ರಮದ ಅರಿವು ಇಂದಿನ ಪೀಳಿಗೆಗೆ ಆಗಬೇಕಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಂಗವಾಗಿ ಬಸವ ಉದ್ಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮವೂ ನೆರವೇರಿತು.
ಬಿಜೆಪಿ ಕಿತ್ತೂರು ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ , ಗ್ರಾಮೀಣ ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾ ಬಿಕ್ಕಣ್ಣವರ,  ಕಿತ್ತೂರು ಶಕ್ತಿ ಕೇಂದ್ರದ ಪ್ರಮುಖ ಸುಭಾಸ ರಾವಳ, ಕಿರಣ ವಾಳದ, ಮಹಾಂತೇಶ ಕಡೆಮನಿ, ಮಂಜುನಾಥ ದೊಡಮನಿ, ಬಸವರಾಜ ಮಾತನವರ, ನಾಗರಾಜ ಅಸುಂಡಿ ಹಾಗೂ ಬಸವೇಶ್ವರ ಕಾಲನಿಯ ಹಿರಿಯರು,  ಭಾಜಪ ಮುಖಂಡರು,  ಕಾರ್ಯಕರ್ತರು ಪಾಲ್ಗೊಂಡಿದ್ದರು.   ಶಿವಾನಂದ ಹನುಮಸಾಗರ ನಿರೂಪಿಸಿದರು,
0/Post a Comment/Comments