ಗತವೈಭವ ಮರಳಿತೇ ಸಂಘಕ್ಕೆ? - kittur


 ಹಿಂದಿನ ಹೋರಾಟ ನೆನಪಿಸಿದ ರೈತರು

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಒಂದು ಕಾಲದ ರೈತಸಂಘಟನೆಯ ದೈತ್ಯ ಶಕ್ತಿಯಾಗಿದ್ದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಮತ್ತು ಬಾಬಾಗೌಡ ಪಾಟೀಲ ಅವರಿಬ್ಬರ ಭಾವಚಿತ್ರ ಹಾಕಲಾಗಿದ್ದ ಬ್ಯಾನರ್‍ನಡಿ ಹಮ್ಮಿಕೊಂಡಿದ್ದ  ರೈತರ ಹೋರಾಟವು ಅವರ ಕಾಲದಲ್ಲಿ ನಡೆಯುತ್ತಿದ್ದ ಹೋರಾಟಗಳನ್ನು  ಸೋಮವಾರ ಹೋಲುವಂತಿತ್ತು ಎಂದು ರೈತರು ಮಾತನಾಡಿಕೊಂಡರು.
ಚಕ್ಕಡಿ, ಡೊಳ್ಳು, ಕಹಳೆ ಸಮೇತ ಧಾವಿಸಿ ಬಂದಿದ್ದ ಹೋರಾಟಗಾರರ ಜೊತೆಗೆ ಹಸಿರು ಟಾವೆಲ್ ಹೊದ್ದುಕೊಂಡು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ಮುಖ್ಯ ಕಾರ್ಯಕ್ರಮ ಮುಗಿದ ನಂತರ ಹೆದ್ದಾರಿ ಕಡೆಗೆ ಹೊರಟಾಗ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆದು ಹೋಯಿತು. ಘೋಷಣೆ ಕೂಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಕಡೆಗೆ ನುಗ್ಗುತ್ತಿದ್ದ ಮುಖ್ಯ ಹೋರಾಟಗಾರರ ಸುತ್ತ ಭದ್ರಕೋಟೆ ನಿರ್ಮಿಸಿದ್ದ ಪೊಲೀಸರ ಕಣ್ಣುತಪ್ಪಿಸಿ, ಆಗಲೇ ಹತ್ತಾರು ಕಾರ್ಯಕರ್ತರು ಹೆದ್ದಾರಿ ಬಂದ್ ಮಾಡಿ ಆಗಿತ್ತು. ಅನಂತರ ಇವರೂ ಅಲ್ಲಿಗೆ ಧಾವಿಸಿ ಹೋದರು. ‘ಮೊದಲೇ ಘೋಷಣೆ ಮಾಡಿದಂತೆ ಹೆದ್ದಾರಿ ಬಂದ್ ಮಾಡಿ ನುಡಿದಂತೆ ನಡೆದುಕೊಂಡಿದ್ದು, ಹಿಂದಿನ ರೈತ ಹೋರಾಟಗಳನ್ನು ಮೆಲುಕು ಹಾಕುವಂತೆ ಆಗಿದೆ' ಎಂದು ಕಾರ್ಯಕರ್ತರು ಮಾತನಾಡಿಕೊಂಡರು.


0/Post a Comment/Comments