ರಾಜಕೀಯದಲ್ಲಿ ತೋಳ್ಬಲ, ದುಡ್ಡು ಮುನ್ನೆಲೆಗೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಗುಣಾತ್ಮಕ ಬದಲಾವಣೆ ಆಗಿಲ್ಲ. ರಾಜಕೀಯದಲ್ಲಂತೂ ಹೇಸಿಗೆಯಾಗುವಷ್ಟು ಬದಲಾವಣೆಯಾಗಿದೆ ಎಂದು ರೈತಪರ ಹೋರಾಟಗಾರ ಹಾಗೂ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರು ಒಂದು ಸಂದರ್ಭದಲ್ಲಿ ಕಳವಳ ಪಟ್ಟಿದ್ದಾರೆ.
ಸಾಮಾನ್ಯ ಜನರು ಇದೇ ರೀತಿ ಇವರಿಗೆ ಬೆಂಬಲ ಮುಂದುವರೆಸಿದರೆ ಏನು ಗತಿ ಎಂಬ ಚಿಂತೆ ಕಾಡುತ್ತಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದರು.
ಅವರ ಮಾತುಗಳಲ್ಲಿಯೇ ಕೇಳಿ:
ಇಲ್ಲಿಯವರೆಗಿನ ಪ್ರತಿಯೊಬ್ಬರ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಗುಣಾತ್ಮಕವಾಗಿ ಬದಲಾವಣೆ ಕಾಣುತ್ತಿಲ್ಲ. ರಾಜಕೀಯದಲ್ಲಂತೂ ಹೇಸಿಗೆ ಆಗುವಷ್ಟು ಬದಲಾವಣೆ ನೋಡುತ್ತಿದ್ದೇವೆ. ಜನಸಾಮಾನ್ಯರು ಇದೇ ರೀತಿ ಮುಂದುವರೆದರೆ ಏನು ಗತಿ, ಸುಧಾರಿಸುವುದು ಹೇಗೆಂಬ ದೊಡ್ಡ ಪ್ರಶ್ನೆ ನನ್ನೆದುರಿಗಿದೆ.
ಬಹುತೇಕ ಎಲ್ಲ ಪಕ್ಷಗಳು ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ಅವರ ಗುಣಮಟ್ಟದ ಕಾಳಜಿ ಮಾಡುತ್ತಿಲ್ಲ. ದುಡ್ಡಿದ್ದವರೂ, ಆ ಭಾಗದಲ್ಲಿ ಯಾವ ಜಾತಿ ಜನರು ಹೆಚ್ಚಿದ್ದಾರೆ ಅದನ್ನು ನೋಡಿಕೊಂಡು ಅಂಥವರÀನ್ನು ಆಯ್ಕೆ ಮಾಡುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಯ ಗುಣ ಮುಖ್ಯವಾಗುತ್ತಿಲ್ಲ. ದುಡ್ಡು ಮತ್ತು ಜಾತಿ ಮುಖ್ಯವಾಗುತ್ತಿದೆ.
ಕೆಲವು ಕಡೆಗಳಲ್ಲಿ ಇನ್ನೂ ತೋಳ್ಬಲ ರಾಜಕಾರಣವಿದೆ. ಅಲ್ಲಿ ತೋಳ್ಬಲ ಇದ್ದವರನ್ನು ಆಯ್ಕೆ ಮಾಡುತ್ತಾರೆ. ಇದನ್ನೆಲ್ಲ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುತ್ತದೆಯೊ ಇಲ್ಲವೊ ಎಂದು ಅನುಮಾನ ಬರುತ್ತದೆ. ಇಂಥ ಅನುಮಾನವನ್ನು ಪ್ರಜಾಪ್ರಭುತ್ವ ರಚನೆಕಾರರು ಅಂದು ಕೂಡಾ ವ್ಯಕ್ತ ಮಾಡಿದ್ದರು.
Post a Comment