‘ಒಡೆದ ದೇವಾಲಯ ಮರು ನಿರ್ಮಾಣ ಮಾಡಿ’ : ಬಜರಂಗದಳ ಕಾರ್ಯಕರ್ತರು ಮನವಿ - kittur

ಅಜಾತಶತ್ರು ಆಸ್ಕರ್ ನಿಧನಕ್ಕೆ ಇನಾಂದಾರ್ ಬಳಗದಿಂದ ಶ್ರದ್ಧಾಂಜಲಿ - click

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರಾಜ್ಯದಲ್ಲಿ ದೇವಾಲಯ ಒಡೆಯುವ ಕೆಲಸ ಸಾಗಿದ್ದು, ಅದನ್ನು  ಕಿತ್ತೂರು ಬಜರಂಗದಳ   ತೀವ್ರವಾಗಿ ಖಂಡಿಸುತ್ತದೆ   ಎಂದು  ಕಾರ್ಯಕರ್ತರು ಗುಡುಗಿದ್ದಾರೆ.
ಇಲ್ಲಿಯ ತಹಶೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಅನಧಿಕೃತ ದೇವಾಲಯ ಇಲ್ಲ.  ಈಗ ಒಡೆಯುವುದನ್ನು ತಕ್ಷಣ ನಿಲ್ಲಿಸಬೇಕು. ಒಡೆದ ದೇವಾಲಯದ ಮರು ನಿರ್ಮಾಣಕ್ಕೆ ತ್ವರಿತ ನಿರ್ಧಾರ ತಾಳಬೇಕು ಎಂದು ಅವರು ಒತ್ತಾಯಿಸಿದರು. 
ಬಜರಂಗ ದಳ ತಾಲೂಕು ಘಟಕದ ಅಧ್ಯಕ್ಷ ಮಡಿವಾಳಪ್ಪ ದಾಸನಕೊಪ್ಪ, ತಾಲೂಕ ಸಂಯೋಜಕ ಭರತ್ ಸಂಗೋಜಿ, ಕಾರ್ಯಕರ್ತರಾದ ದೀಪಕ್ ಮಾರಿಹಾಳ, ಉಮೇಶ್ ವರ್ಗಣ್ಣವರ,   ಸುಭಾಸ್ ಗೂರನ್ನವರ, ರಾಜು ತಿಗಡಿ, ರಾಘವೇಂದ್ರ ಕಲವಡ್ಡರ, ನಗರ ಸಂಯೋಜಕ  ಶಿವಯೋಗಿ ಹಿರೇಮಠ,  ಕಾರ್ಯಕರ್ತರು ಉಪಸ್ಥಿತರಿದ್ದರು.


0/Post a Comment/Comments