150 ಖಾಸಗಿ ಶಾಲೆಗಳು ಮಾರಾಟಕ್ಕೆ!
ಪ್ರೆಸ್‍ಕ್ಲಬ್ ವಾರ್ತೆ
ಕರ್ನಾಟಕದಾದ್ಯಂತ 150ಕ್ಕೂ ಹೆಚ್ಚು ಅನುದಾನರಹಿತ ಖಾಸಗಿ ಶಾಲೆಗಳು ಮಾರಾಟಕ್ಕಿವೆ ಎಂಬ ಆಘಾತಕಾರಿ ಸುದ್ದಿ ಶಿಕ್ಷಣ ವಲಯದಲ್ಲಿ ಹರಿದಾಡುತ್ತಿದೆ.
ಕೋವಿಡ್ ಸೋಂಕು ತಂದ ಸಂಕಷ್ಟ ಸ್ಥಿತಿಯಿಂದಾಗಿ ಕಳೆದ ಒಂದು ವರ್ಷದಿಂದ ಬಾಗಿಲು ಮುಚ್ಚಿಕೊಂಡಿರುವ ಸಣ್ಣಪುಟ್ಟ ಅನುದಾನರಹಿತ ಖಾಸಗಿ ಶಾಲೆಗಳು ಈಗ ದಿವಾಳಿ ಹಂತಕ್ಕೆ ತಲುಪಿವೆ. ಆಡಳಿತ ಮಂಡಳಿಯವರು ಅವುಗಳನ್ನು ಮಾರಾಟ ಮಾಡಲು ಯೋಚಿಸುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಕೆಲವೇ ಕೆಲವು ಉತ್ತಮ ಸ್ಥಿತಿಯಲ್ಲಿರುವ ಖಾಸಗಿ ಶಾಲೆಗಳು ಆನ್‍ಲೈನ್ ತರಗತಿ ಪ್ರಾರಂಭಿಸಿ ನಡೆಸುತ್ತಿದ್ದಾರೆ. ಅದು ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಎಲ್ಲ ಮಕ್ಕಳೂ ಸುಧಾರಿತ ಮೊಬೈಲುಗಳನ್ನು ಹೊಂದುವುದು ಗ್ರಾಮೀಣ ಮಟ್ಟದಲ್ಲಿ ಅಸಾಧ್ಯದ ಮಾತಾಗಿದೆ. ಹೀಗಾಗಿ ಶಾಲೆಯ ಕನಿಷ್ಟ ವೆಚ್ಚಗಳನ್ನೂ ಆಡಳಿತ ಮಂಡಳಿಯವರಿಗೆ ಭರಿಸಲು ಸಾಧ್ಯವಾಗುತ್ತಿಲ್ಲ.
ಅಲ್ಲಿ ದುಡಿಯುತ್ತಿರುವ ಶಿಕ್ಷಕರ ಪಾಡಂತೂ ಹೇಳತೀರದು. ಎಷ್ಟೋ ಶಿಕ್ಷಕರು ಸಣ್ಣಪುಟ್ಟ ವ್ಯಾಪಾರ ಮಾಡಿದರೆ, ಇನ್ನೇಷ್ಟೋ ಜನ ದಿನಗೂಲಿಗೆ ಹೋಗುವಂತಾಗಿದೆ. ಖಾಸಗಿ ಶಾಲೆಗಳ ಭವಿಷ್ಯ ಸಂಪೂರ್ಣ ಅತಂತ್ರವಾಗಿ ಮುಂದೆ ನಡೆಸಲಾಗದ ಹಂತಕ್ಕೆ ತಲುಪಿರುವುದು ದುರಂತ.

ಇಂಥ ಸಂಕಷ್ಟದ ಸ್ಥಿತಿಯಲ್ಲಿರುವ ಖಾಸಗಿ ಅನುದಾನ ರಹಿತ ಸಂಸ್ಥೆಗಳನ್ನು, ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಯೋಚಿಸಿ ಮಾರಾಟ ಮಾಡದಂತೆ ಸರ್ಕಾರ ನೆರವು ನೀಡಲು ಮುಂದಾಗಬೇಕು. ಪಕ್ಕದ ತೆಲಂಗಾಣ ರಾಜ್ಯವು ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳು 25 ಕೆಜಿ ಅಕ್ಕಿ ಹಾಗೂ 2000 ರೂಪಾಯಿ ಸಹಾಯಧನ ನೀಡಲು ಮುಂದಾಗಿದೆ. ಅದರಂತೆಯೇ ಕರ್ನಾಟಕದಲ್ಲಿಯೂ ಕೂಡ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದರೆ ಮುಳುಗುತ್ತಿರುವ ಸಂಸ್ಥೆಗಳನ್ನು ಬದುಕುಳಿಸಬಹುದು ಮತ್ತು ಭವಿಷ್ಯದಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂಬುದು ಪ್ರಜ್ಞಾವಂತರ ಕಳಕಳಿಯಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Post a Comment