‘ಒಕ್ಕಟ್ಟಿನಿಂದ ಸಂಘಟನೆಗೆ ಬಲ ತುಂಬಿ’ - ಬಾಬಾಸಾಹೇಬ ಪಾಟೀಲ ಸಲಹೆ - kittur

‘ವಾಯಿಸ್ ಆಫ್ ಮಲ್ಲಮ್ಮನ ಬೆಳವಡಿ’ ಗ್ರ್ಯಾಂಡ್ ಫಿನಾಲೆ ಸೆ. 26ಕ್ಕೆ - click...

‘ಒಕ್ಕಟ್ಟಿನಿಂದ ಸಂಘಟನೆಗೆ ಬಲ ತುಂಬಿ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ವಿಶ್ವಕರ್ಮ ಸಮಾಜದವರು ಸಣ್ಣ ಸಂಖ್ಯೆಯಲ್ಲಿದ್ದರೂ ಕರಕುಶಲ  ಕಲೆಯಲ್ಲಿ ಹೆಚ್ಚು ಪ್ರಭಾವಿಗಳಾಗಿದ್ದಾರೆ.  ಒಕ್ಕಟ್ಟಿನಿಂದ ಅವರೆಲ್ಲ ಸಮಾಜದ ಸಂಘಟನೆಗೆ ಬಲ ತುಂಬಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.
ತಾಲೂಕಿನ ಬಸರಕೋಡ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದವರು ಏರ್ಪಡಿಸುವ ಒಳ್ಳೆಯ ಕಾರ್ಯಗಳಿಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂದು ಪುನರುಚ್ಛರಿಸಿದರು.


ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಮಾತನಾಡಿ, ಸಂಘಟನೆ ಮಾಡುವುದು ಯಾರ ವಿರುದ್ಧವೂ ಅಲ್ಲ, ಸಮಾಜದ ಅಭಿವೃದ್ಧಿಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು  ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಆರ್. ಪ್ರಮೋದಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಡಿ. ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. 
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಹಬೀಬ ಶಿಲೇದಾರ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಬಡಿಗೇರ, ಉಪಾಧ್ಯಕ್ಷ ಮೌನೇಶ ಬಡಿಗೇರ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಿರಣ ವಾಳದ, ಅನಿಲ ಎಮ್ಮಿ, ಸುರೇಶ ಬಡಸದ, ರಮೇಶ ಉಗರಕೋಡ, ಸಮಾಜ ಮುಖಂಡರಾದ ಭಾಸ್ಕರ ಬಡಿಗೇರ, ಬಸವರಾಜ ಬಡಿಗೇರ, ಜಯಣ್ಣ ಅಕರ್ಸಾಲಿ,  ಬಾಬು ಶಿರೋಮಣಿ, ಚಿದಾನಂದ ಬಡಿಗೇರ, ವಸಂತ ಬಾಣಕರ, ಗುಂಡು ದೇಶನೂರ ಭಾಗವಹಿಸಿದ್ದರು.

 

0/Post a Comment/Comments