ಬೆಳವಡಿಯಲ್ಲಿ ಜಿಲ್ಲಾ ನಾಟಕೋತ್ಸವ ಸಂಭ್ರಮ - kittur


 ಅರಳಿದ ಅರಮನೆ ನಿರ್ಮಾಣದ ಕನಸು - click...

         ರಂಗಭೂಮಿ ಕಲೆಗೆ ಪ್ರೋತ್ಸಾಹ ಅಗತ್ಯ
ಪ್ರೆಸ್‍ಕ್ಲಬ್ ವಾರ್ತೆ
ಮಲ್ಲಮ್ಮನ ಬೆಳವಡಿ: ಆಧುನಿಕ ತಂತ್ರಜ್ಞಾನ  ಸಾಧನಗಳ ಅಧಿಕ ಬಳಕೆಯು ಜೀವನಶೈಲಿಗೆ ಹೆಚ್ಚು ಪೂರಕವಾಗಿಲ್ಲ. ಇವುಗಳ ಬಳಕೆಯು ರಂಗಭೂಮಿ ಕಲೆಯಿಂದ ಜನರು ದೂರ ಸರಿಯುವಂತಾಗಿದೆ ಎಂದು ರಾಣಿ ಮಲ್ಲಮ್ಮ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್. ಬಿ. ಪಾಟೀಲ ಆತಂಕಪಟ್ಟರು.
ಇಲ್ಲಿಯ ಪರಮನಾಯ್ಕರ ಕಲ್ಯಾಣ ಮಂಟಪÀದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಎಂ.ಕೆ.ಹುಬ್ಬಳ್ಳಿ, ಗದ್ದಿಕರವಿನಕೊಪ್ಪ ಗ್ರಾಮಗಳ ಕರ್ನಾಟಕ ಸರ್ವ ಕಲಾವಿದರ ಹಿತರಕ್ಷಣಾ ವೇದಿಕೆ  ಜಂಟಿ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೆಳಗಾವಿ ಜಿಲ್ಲಾ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
ದೂರದರ್ಶನ, ಮೊಬೈಲ್ ಹಾಗೂ ಸಿನಿಮಾಗಳ ವೀಕ್ಷಣೆ ಭರಾಟೆಯಿಂದಾಗಿ ನಮ್ಮ ಸಂಸ್ಕøತಿಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ. ನಾಡಿನ ಕಲೆ, ಇತಿಹಾಸ ಮತ್ತು ಸಾಂಸ್ಕøತಿಕ ಚರಿತ್ರೆ ಉಳಿಯಬೇಕಾದರೆ ಎಲ್ಲರೂ ನಾಟಕ ಕಲೆ ಮತ್ತು ಕಲಾವಿದರನ್ನು ಪೋಷಿಸಿ ಬೆಳೆಸಬೇಕು ಎಂದು ಒತ್ತಿ ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್.ಎಸ್. ರೊಟ್ಟಯ್ಯನವರ ಮಾತನಾಡಿದರು.


ಬೆಳವಡಿ ಗ್ರಾಮದ ನಿವೃತ್ತ ಸೈನಿಕರನ್ನು ಹಾಗೂ ನೇತಾಜಿ ಸುಭಾಸಚಂದ್ರ ಭೋಸ್ ತರುಣ ಕಲಾ ನಾಟ್ಯಸಂಘದ ಕಲಾವಿದರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬಸಯ್ಯಸ್ವಾಮಿ ವಿರಕ್ತಮಠ ಸಾನಿಧ್ಯ ವಹಿಸಿದ್ದರು. ಸರ್ವ ಕಲಾವಿದರ ಸಂಘದ ಅಧ್ಯಕ್ಷ ಮಲಗೌಡ ಪಾಟೀಲ, ಪ್ರಮುಖರಾದ ಗುರುಪಾದ ಕಳ್ಳಿ, ನಿಂಗಪ್ಪ ಚೌಡಣ್ಣವರ, ಬಸವರಾಜ ಇಂಗಳಗಿ, ಬಿ.ಜಿ. ದೇಗಾವಿ, ಶಂಕರ ಕರೀಕಟ್ಟಿ, ಮುಗುಟಸಾಬ ಹುದಲಿ, ಮಡ್ಡೆಪ್ಪ ಪರಮನಾಯ್ಕರ, ಫಕ್ಕೀರಪ್ಪ ಕಡಕೋಳ, ಕಲಾವಿದರು, ಭಾಗವಹಿಸಿದ್ದರು.
ಪ್ರಕಾಶ ಹುಂಬಿ ಸ್ವಾಗತಿಸಿದರು. ಎಂ.ಪಿ. ಉಪ್ಪಿನ ನಿರೂಪಿಸಿದರು. ಬಳಿಕ ಶೂರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಹಾಗೂ ಸುಯೋಧನ ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. 

0/Post a Comment/Comments