ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಆಂಜನೇಯ - kittur

ವಿಧಾನಸಭೆಯಲ್ಲಿ ಕಳಚಿದ್ದು ಯಾರ ಪಂಚೆ? - click...


 ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿ ಆಂಜನೇಯ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಸಾಮಾಜಿಕ ಜಾಲತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿ ಯುವ ಮುಖಂಡ ಆಂಜನೇಯ ಪೂಜೇರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.


ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅನುಮೋದನೆ ಮೇರೆಗೆ ಈ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಬಿ. ಆರ್. ನಾಯ್ಡು ಈ ನೇಮಕ ಮಾಡಿ ಸೆ. 22 ರಂದು ಆದೇಶ ಹೊರಡಿಸಿದ್ದಾರೆ. 
ವಾಟ್ಸಪ್, ಟ್ವೀಟರ್, ಫೇಸ್‍ಬುಕ್, ಕ್ಲಬ್‍ಹೌಸ್ ಸೇರಿ ಇತ್ಯಾದಿ ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಶ್ರಮಿಸಬೇಕು ಎಂದು ನಾಯ್ಡು ಅವರು ಆದೇಶ ಪತ್ರದಲ್ಲಿ ಸಲಹೆ ನೀಡಿದ್ದಾರೆ.

0/Post a Comment/Comments