ದೊಡವಾಡ: ಹೆಸರು ಖರೀದಿಗೆ ಚಾಲನೆ - Dodawad


 ಭಾರತ ಬಂದ್ ಗೆ ಬೆಂಬಲಿಸಿ ಕಿತ್ತೂರಿನಲ್ಲಿ ನಡೆದ ರೈತರ ಪ್ರತಿಭಟನೆಯ ವಿಡಿಯೋ ನೋಡಿ...




ದೊಡವಾಡ: ಹೆಸರು ಖರೀದಿಗೆ ಚಾಲನೆ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಗೆ ಸೋಮವಾರ ಚಾಲನೆ ನೀಡಲಾಯಿತು.
ಸಂಸ್ಥೆ ಉಪಾಧ್ಯಕ್ಷ ಉದಯ ಕೊಟಬಾರಿ ಮಾತನಾಡಿ, ಸರ್ಕಾರ ನಿಗದಿ ಪಡಿಸಿರುವ ಮಾನದಂಡಕ್ಕೆ ಅನುಗುಣವಾಗಿ ಎಫ್‍ಎಕ್ಯೂ ಗುಣಮಟ್ಟದ ಹೆಸರುಕಾಳನ್ನು ಕ್ವಿಂಟಲ್‍ಗೆ ರೂ. 7275 ಧಾರಣಿಯಂತೆ ಖರೀದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ನುಡಿದರು.


ಬೈಲಹೊಂಗಲ ತಾಲೂಕು ಸಹಾಯಕ ಕೃಷಿ ಅಧಿಕಾರಿ ಎಸ್.ಎಸ್. ಮಾಳಗಿ, ಪಿಕೆಪಿಎಸ್ ನಿರ್ದೇಶಕ ವಿಠ್ಠಲ ಗಾಬಿ, ವೀರೇಂದ್ರ ಸಂಗೊಳ್ಳಿ, ಈಶ್ವರ ಅಂದಾನಶೆಟ್ಟಿ, ಮಡಿವಾಳಪ್ಪ ವಿಭೂತಿ, ಬಸವರಾಜ ಮುರಗೋಡ, ಯಲ್ಲಪ್ಪ ಹಿರಗಣ್ಣವರ, ಚನ್ನಯ್ಯ ದಾಬಿಮಠ, ಶಂಕ್ರೆವ್ವ ಚೌಡಣ್ಣವರ, ಮುಕಾನಿ ಎಂ. ಎಸ್.ಶಿಂಧೆ, ರೈತರಾದ ಮಲ್ಲಪ್ಪ ಯರಿಕಿತ್ತೂರ, ಶಂಕ್ರೆಪ್ಪ ಚೌಡಣ್ಣವರ, ಈರಪ್ಪ ಕೋಟಗಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



0/Post a Comment/Comments