ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ - Dharwad

 ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ  ಮಚ್ಚಿನಿಂದ  ಹಲ್ಲೆ - click...

ಓಟಿಟಿ ವೇದಿಕೆ ‘ಧಾರವಾಡ ಟಾಕೀಸ್’ 

ಪ್ರೆಸ್‍ಕ್ಲಬ್ ವಾರ್ತೆ
ಧಾರವಾಡ: ನೂರಾರು ಕನಸುಗಳ ಮೂಟೆ ಹೊತ್ತುಕೊಂಡು ಹಲವಾರು ಪ್ರತಿಭೆಗಳು ಸಿನಿಮಾ ರಂಗದಲ್ಲಿ ಸಾಧನೆ ಮಾಡಲು ಧಾವಿಸುತ್ತಾರೆ. ಕೆಲವರಿಗೆ 
ಅವಕಾಶಗಳು ದೊರೆಯುತ್ತವೆ. ಹೀಗೆ ಅವಕಾಶ ಸಿಕ್ಕ ಕಲಾವಿದರನ್ನೂ  ಕೊರೊನಾ ಕಾಲ ಸಂಕಷ್ಟಕ್ಕೆ ತಳ್ಳಿದೆ. ಬಣ್ಣದ ಬದುಕು ನಂಬಿದ್ದವರು, ಜೀವನ ಬಂಡಿ ಎಳೆಯಲು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಬವಣೆಯ ವ್ಯೂಹದಲ್ಲಿ ಬಿದ್ದು ನಲುಗಿ ಹೋಗಿರುವ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಗಳಿಗೆ ‘ಧಾರವಾಡ ಟಾಕೀಸ್' ಎಂಬ ಔಖಿಖಿ ವೇದಿಕೆ ಈಗ ಅವಕಾಶದ ಬಾಗಿಲನ್ನು ತೆರೆದಿದೆ. ಇದರ ನಿರ್ಮಾಣದ ಸಾಹಸಿಗಳು ಪ್ರಕೃತಿ ಸೇವಾ ಟ್ರಸ್ಟ್ ಮತ್ತು ಬಜಾಜ್ ಸಮೂಹ ಕಂಪನಿ ಸಂಸ್ಥಾಪಕ ಕಿಶೋರ್ ಬಜಾಜ್ ಅವರು. 


ಅವರ ‘ಧಾರವಾಡ ಟಾಕೀಸ್' ವೇದಿಕೆ ಕನಸು ಅನುಷ್ಠಾನವಾಗಿದ್ದು, ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಇದಕ್ಕೆ ಶುಭಾಶಯ ಕೋರಿದ್ದಾರೆ.
ಸುಧಾರಣೆ ಕಾಣಲಿ
ಹಣಕಾಸು ವಿಭಾಗದ ಮುಖ್ಯಸ್ಥೆ ಮಮತಾ ನರಗುಂದಕರ ಬುಧವಾರ ಜಿಲ್ಲಾಧಿಕಾರಿ ಅವರಿಗೆ ಭೇಟಿ ಮಾಡಿ ಧಾರವಾಡ ಟಾಕೀಸ್ ನಿರ್ಮಾಣದ ಹಿಂದಿನ ಕನಸು ಮತ್ತು ಗುರಿಯನ್ನು ಬಿಚ್ಚಿಟ್ಟರು. 
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು, ‘ಕಲಾವಿದರಿಗಾಗಿ ಮಾಡುತ್ತಿರುವ ಕಾರ್ಯ ಉತ್ತಮವಾಗಿದೆ. ಈ ವೇದಿಕೆಯಿಂದ ಕಲಾವಿದರ ಜೀವನ ಮತ್ತೆ ಸುಧಾರಣೆಯ ಹಳಿಗೆ ಬರುತ್ತದೆಂದು   ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು' ಎಂದು ಮಮತಾ ಮಾಹಿತಿ ನೀಡಿದರು.

0/Post a Comment/Comments