ಪಂಜಾಬ್ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರ್ತಾರಾ..? - Bengaluru


ಪಂಜಾಬ್ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರ್ತಾರಾ..?
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಸೆ. 18 ರಂದು ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಭಾರತೀಯ ಜನತಾ  ಪಕ್ಷ ಸೇರಲಿದ್ದಾರೆಯೇ?
ಇಂಥದೊಂದು ವದಂತಿ ದಿಲ್ಲಿಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇದಕ್ಕೆ ರೆಕ್ಕೆ, ಪುಕ್ಕ ಬರತೊಡಗಿವೆ.


ಇದಕ್ಕೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ  ರಣದೀಪ್ ಸುರ್ಜೇವಾಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು  ಗೃಹ ಸಚಿವ ಅಮಿತ್ ಶಾ  ಪ್ರತೀಕಾರದ  ಬೆಂಕಿ ಉಗುಳುತ್ತಿದ್ದಾರೆ.  ಅವರಿಬ್ಬರು ಪಂಜಾಬ್  ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದಾರೆ. ತಮ್ಮ ಬಂಡವಾಳಶಾಹಿ  ಸ್ನೇಹಿತರ ಹಿತಾಸಕ್ತಿಯನ್ನು  ರೈತ ವಿರೋಧಿ ಕಾಯ್ದೆಗಳಿಂದಾಗಿ  ಪೂರೈಸಲು ವಿಫಲರಾಗಿದ್ದಾರೆ. ಬಿಜೆಪಿಯವರ ರೈತ ವಿರೋಧಿ    ಪಿತೂರಿ ಯಶಸ್ವಿಯಾಗುವುದಿಲ್ಲ  ಎಂದು ಆರೋಪಿಸಿದ್ದಾರೆ. ‘No Farmers, No Food' ಎಂದು ಹ್ಯಾಶ್‍ಟ್ಯಾಗ್ ಕೂಡಾ ಅವರು ಬಳಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಚರಣಜೀತ್ ಸಿಂಗ್ ಚೆನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿಯನ್ನಾಗಿ ಮಾಡಿದ್ದನ್ನು    ಅವರಿಂದ ಸಹಿಸಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. 
ಎಲ್ಲ   ಉಹಾಪೋಹಗಳನ್ನು ಅಲ್ಲಗಳೆದಿರುವ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು, ರೈತರ ಪ್ರತಿಭಟನೆ ವಿಷಯವಾಗಿ ಚರ್ಚಿಸಲು ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ


0/Post a Comment/Comments