ಧಾರವಾಡ ಟಾಕೀಸ್ ಗೆ ಶುಭ ಕೋರಿದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ - click...
ಸೆ. 29: ಸರ್ಜಿಕಲ್ ಸ್ಟ್ರೈಕ್ ದಿನ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಕಾಶ್ಮೀರದ ಒಂದು ಪ್ರದೇಶದ ಹೆಸರು ಉರಿ. ತಣ್ಣಗಿದ್ದ ಉರಿ ಅಂದು ಒಳಗೊಳಗೆ ಕುದಿಯಲು ಪ್ರಾರಂಭಿಸಿತ್ತು. ಅದಕ್ಕೆ ಕಾರಣವಾಗಿದ್ದವರು ಭಯೋತ್ಪಾದಕರು. 2016 ಸೆ. 18 ರಂದು ಉರಿಯ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಪ್ರಾಯೋಜಿಸಿದ್ದ ಭಯೋತ್ಪಾದಕರÀ ದಾಳಿಗೆ ಪ್ರತಿಯಾಗಿ ನಡೆಸಿದ್ದ ದಾಳಿಯಲ್ಲಿ 19 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
ಆದರೆ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದು ಭಾರತ ಸರ್ಕಾರ ಹಾಗೂ ನಮ್ಮ ವೀರ ಸೈನಿಕರು. ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ನೆಲೆಗೆ ನುಗ್ಗಿ ಭಾರತದ ವೀರಸೈನಿಕರು ಸೇಡು ತೀರಿಸಿಕೊಂಡಿದ್ದು ಸೆ. 28 ರಂದು.
ಅಂದಿನಿಂದ ಕೇಂದ್ರ ಸರ್ಕಾರ ಸೆ. 29 ರಂದು ‘ಸರ್ಜಿಕಲ್ ಸ್ಟ್ರೈಕ್ ದಿನ' ಆಚರಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸೇನಾ ಕ್ರಮದ ವಿವರಗಳನ್ನು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಸೈನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸೈನಿಕರು ಸಾವನ್ನಪ್ಪಿದ ನಂತರ ಸೇನೆಯೊಳಗೆ ‘ಕೋಪ'ವು ನಿರ್ಮಾಣವಾಗಿದ್ದರಿಂದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯೋಜಿಸಲಾಯಿತು ಎಂದು ಪ್ರಧಾನಿ ಹೇಳಿದ್ದಾರೆ.
ಯಶಸ್ಸು ಅಥವಾ ವೈಫಲ್ಯ ಕುರಿತು ಯೋಚಿಸಬೇಡಿ. ‘ಸೂರ್ಯೋದಯಕ್ಕೆ ಮುಂಚಿತವಾಗಿ' ಹಿಂತಿರುಗಿ ಎಂದು ಸೈನಿಕರಿಗೆ ಸೂಚಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯೋಜಿಸಲು ಮತ್ತು ಜಾರಿಗೊಳಿಸಲು ಸೇನೆಗೆ ಸರ್ಕಾರವು ಮುಕ್ತ ಹಸ್ತ ನೀಡಿದೆ ಎಂದೂ ಪ್ರಧಾನಿ ಮೋದಿ ಸಂದರ್ಶನದಲ್ಲಿ ನುಡಿದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಅನ್ನು ದೇಶದ ಜನರು ಹಾಗೂ ಸಶಸ್ತ್ರ ಪಡೆಗಳು ಶ್ಲಾಘಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಗಡಿಯೊಳಗೆ ನುಸುಳುವ ಭಯೋತ್ಪಾದಕರನ್ನು ಕೊಲ್ಲಬಹುದು ಹಾಗೂ ಅಗತ್ಯ ಬಿದ್ದರೆ ಗಡಿ ದಾಟಿ ಹೊಡೆಯುತ್ತೇವೆ ಎನ್ನುವ ಮೂಲಕ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
Post a Comment