ಯಡಿಯೂರಪ್ಪ ಅಲ್ಲ ಸೇನಾಧಿಪತಿ! : ಅಲ್ಲಿ ಯೋಗಿ; ಇಲ್ಲಿ ಬೊಮ್ಮಾಯಿ - Bengalore


ಅಲ್ಲಿ ಯೋಗಿ; ಇಲ್ಲಿ ಬೊಮ್ಮಾಯಿ

ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಉತ್ತರ ಪ್ರದೇಶದಲ್ಲಿ 2022ಕ್ಕೆ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವ ವಹಿಸುವರು ಎಂದು ಅಲ್ಲಿಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವಸಿಂಗ್ ಬುಧವಾರ ಹೇಳಿದ್ದಾರೆ. 
ಬಿಜೆಪಿ ಮನೆ, ಮನೆ ಸಂಪರ್ಕ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ ಎಂದರು.


ಉತ್ರರ ಪ್ರದೇಶದ ಅಭಿವೃದ್ಧಿ ನಮಗೆ ಬೇಕು. ಅಪರಾಧ ಮತ್ತು ಬಂದೂಕು ಮುಕ್ತ ರಾಜ್ಯ ಆಗಬೇಕು. ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಉತ್ತರ ಪ್ರದೇಶ ಈಗ ಉತ್ತಮ ಪ್ರದೇಶವಾಗಿದೆ   ಎಂದು    ದೇವಸಿಂಗ್ ವ್ಯಾಖ್ಯಾನಿಸಿದ್ದಾರೆ.
2023ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ   ಚುನಾವಣೆ ನಡೆಯಲಿದ್ದು,  ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಅಮಿತ್ ಶಾ ಈಗಾಗಲೇ ಇಲ್ಲಿ  ಕೂಡಾ ಘೋಷಣೆ ಮಾಡಿದ್ದಾರೆ.