ದೊಡವಾಡ ಭಾಗದಲ್ಲಿ ಬ್ಯಾಟರಿ ಕಳ್ಳತನ ಹಾವಳಿ - click...
ರಸ್ತೆಗೆ ರೈತರ ಜಮೀನು ಬೇಡ
ಪ್ರೆಸ್ಕ್ಲಬ್ ವಾರ್ತೆ
ಬೆಂಗಳೂರು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಪಡಿಸುವಾಗ ರೈತರ ಜಮೀನು ವಶಕ್ಕೆ ಪಡೆದು ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ್ ಸರ್ಕಾರದ ಗಮನ ಸೆಳೆದರು.
ವಿಧಾನಸಭೆಯಲ್ಲಿ ಗುರುವಾರದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಸ್ತೆ ನಿರ್ಮಾಣ ಮಾಡುವಾಗ ಎರಡೂ ಬದಿಗೆ ರಸ್ತೆ ವಶಪಡಿಸಿಕೊಂಡು 20 ಅಡಿ ಅಗಲದ ರಸ್ತೆ ಮಾಡುತ್ತಿದ್ದಾರೆ. ಒಂದು ಎಕರೆ ಇರುವ ರೈತರ ಜಮೀನಿನಲ್ಲಿ ಇಲ್ಲಿ ಅರ್ಧ ಎಕರೆಯಷ್ಟು ಕೃಷಿ ಜಮೀನು ಹೋಗುತ್ತಿದೆ ಎಂದು ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ಈ ಯೋಜನೆ ಪ್ರಾರಂಭಗೊಂಡು ಎರಡು ದಶಕ ಕಳೆದಿದೆ. ಪ್ರಧಾನಿ ವಾಜಪೇಯಿ ಅವರ ಕಾಲದಲ್ಲಿ ಪ್ರಾರಂಭಗೊಂಡಿತು. ರೈತರ ಜಮೀನು ತೆಗೆದುಕೊಂಡು ರಸ್ತೆ ನಿರ್ಮಿಸುವುದು ಈ ಯೋಜನೆ ಉದ್ದೇಶವಲ್ಲ. ಮೊದಲು ಅಗಲವಾಗಿದ್ದಷ್ಟೇ ರಸ್ತೆ ನಿರ್ಮಿಸುವುದು ಇದರ ಗುರಿ ಎಂದರು.
ಹಾಗೊಂದು ವೇಳೆ ಮಾಡುತ್ತಿದ್ದರೆ ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದು ಸಚಿವರು ಉತ್ತರಿಸಿದರು.