ಸ್ವಾತಿ ಕಿಡದಾಳ ‘ವಾಯ್ಸ್ ಆಫ್ ಬೆಳವಡಿ’ - Belavadi


 ದೊಡವಾಡ: ಹೆಸರು ಖರೀದಿಗೆ ಚಾಲನೆ - click...

ಸ್ವಾತಿ ಕಿಡದಾಳ ‘ವಾಯ್ಸ್ ಆಫ್ ಬೆಳವಡಿ’

ಪ್ರೆಸ್‍ಕ್ಲಬ್ ವಾರ್ತೆ
ಮಲ್ಲಮ್ಮನ ಬೆಳವಡಿ: ಇಲ್ಲಿಯ ಶಾರದಾ ಸಂಗೀತ ಪಾಠಶಾಲೆ ಹಾಗೂ ಭವಾನಿ ಮೆಲೊಡೀಸ್ ಜಂಟಿ ಸಹಯೋಗದಲ್ಲಿ ಭಾನುವಾರ ನಡೆದ ಉತ್ತರ ಕರ್ನಾಟಕ ಕಲಾವಿದರ ಕಲಾ ಪ್ರತಿಭೋತ್ಸವ-2021 ಸ್ಪರ್ಧೆಯಲ್ಲ್ಲಿ ಬೆಳಗಾವಿಯ ಸ್ವಾತಿ ಕಿಡದಾಳ ‘ವಾಯ್ಸ್ ಆಫ್ ಬೆಳವಡಿ' ಆಗಿ ಹೊರಹೊಮ್ಮಿದ್ದಾರೆ.
ಹಳಿಯಾಳದ ಕಿರಣ ಗೋಂಧಳಿ ದ್ವಿತೀಯ, ಬೆಳವಡಿಯ ತ್ರಿವೇಣಿ ಬಡಿಗೇರ ತೃತೀಯ ಹಾಗೂ ಯರಗಟ್ಟಿಯ ರೇಖಾ ಬಿ. ಚತುರ್ಥ ಸ್ಥಾನ ಗಳಿಸಿದರು.
ಇದಕ್ಕೂ ಮೊದಲು ಸ್ಪರ್ಧೆಗೆ ಚಾಲನೆ ನೀಡಿದ ರಾಹುಲ ಸತೀಶ ಜಾರಕಿಹೊಳಿ ಮಾತನಾಡಿ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಿ ರಾಜ್ಯಮಟ್ಟದಲ್ಲಿ ಅವರು ಗುರುತಿಸುವಂತಹ ಕೆಲಸವನ್ನು ಸಂಘ,ಸಂಸ್ಥೆಗಳು ಮಾಡಬೇಕು ಎಂದು ಮನವಿ ಮಾಡಿದರು.
ಗ್ರಾಮೀಣ ಮಟ್ಟದಲ್ಲಿ ಸಂಗೀತ ಸ್ಪರ್ಧೆ ಏರ್ಪಡಿಸಿ  ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವ ಬೆಳವಡಿ ಜನತೆಯ ಕಲಾಸಕ್ತಿ ಶ್ಲಾಘನೀಯ ಎಂದರು. 


ಬೆಳವಡಿ  ಸಂಸ್ಥಾನ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ನಯಾನಗರ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಬೈಲಹೊಂಗಲ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ಬಸಯ್ಯಸ್ವಾಮೀಜಿ ವಿರಕ್ತಮಠ ಸಾನಿಧ್ಯ ವಹಿಸಿದ್ದರು.
ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ  ಕುರಿ,  ಗಣ್ಯರಾದ ಡಾ.ಆರ್.ಬಿ.ಪಾಟೀಲ, ಸಿ.ಕೆ. ಮೆಕ್ಕೇದ, ರಫೀಕ್ ಬಡೇಘರ್, ಹಬೀಬ ಶಿಲೇದಾರ, ಫಕ್ಕೀರಪ್ಪ ಕರೀಕಟ್ಟಿ, ಶಿವಾನಂದ ಗುರ್ಲಕಟ್ಟಿ, ಡಾ. ಡಿ.ವೈ. ಗರಗದ,  ವೀರು ದೊಡ್ಡವೀರಪ್ಪನವರ,  ಶಿವಾನಂದ ಕೋಲಕಾರ, ನಿಂಗರಾಜ ಹುಣಸಿಮರದ, ಕಾಂತಯ್ಯ ಕಾರಿಮನಿ, ವಿ.ಎಸ್.ಬಳಿಗಾರ, ಜಿ.ವಿ.ಹಿರೇಮಠ, ನಾಗರಾಜ ಗುಂಡ್ಲೂರ, ನಿಖಿಲ್ ಮಾಡಲಗಿ, ಎಂ.ಬಿ. ಕಮ್ಮಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಉಪನ್ಯಾಸಕ ಎಂ.ಪಿ. ಉಪ್ಪಿನ, ಎಸ್.ಎಂ. ಕರೀಕಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಿ ಕನ್ನಡ ಟಿವಿ ಚಾನೆಲ್ ಪ್ರಸ್ತುತ ಪಡಿಸುವ ‘ಡಿಕೆಡಿ' ಖ್ಯಾತಿಯ ಮಾಸ್ಟರ್ ವಿನೋದ, ಚಿತ್ರ ಕಲಾವಿದ ಸಿದ್ದು ಇಟಗಿ, ಗಾಯಕಿ ಪ್ರಣತಿ ಹಾಗೂ ಶಾರದಾ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು

0/Post a Comment/Comments