ರಸಗೊಬ್ಬರ ಪೂರೈಕೆಗೆ ಕೃಷಿ ಸಚಿವರಲ್ಲಿ ಮನವಿ - Bailhongal


ರಸಗೊಬ್ಬರ ಪೂರೈಕೆಗೆ ಕೃಷಿ ಸಚಿವರಲ್ಲಿ ಮನವಿ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಗುರುವಾರ ಇಲ್ಲಿಗೆ  ಆಗಮಿಸಿದ್ದ ಕೃಷಿ ಸಚಿವ ಬಿ. ಸಿ. ಪಾಟೀಲ ಅವರಿಗೆ ದೊಡವಾಡ ಭಾಗದ ರೈತರು ಭೇಟಿಯಾಗಿ, ಸಮರ್ಪಕ ರಸಗೊಬ್ಬರ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಭಾಗದ ರೈತರಿಗೆ ಬೇಡಿಕೆಗೆ ತಕ್ಕಂತೆ ಡಿಎಪಿ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಗಳಿಗೆ ಶೀಘ್ರ ನೇಮಖಾತಿಯನ್ನೂ ನಡೆಸಬೇಕು ಎಂದು ಅವರು ಮನವಿ ಸಲ್ಲಿಸಿದರು. 
ಕಾಡಾ ಅಧ್ಯಕ್ಷ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ದೊಡವಾಡ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ರೈತರಾದ ಸಂಗಣ್ಣ ಕರಿಸಿರಿ, ಮಲ್ಲಪ್ಪ ಯರಿಕಿತ್ತೂರ ಉಪಸ್ಥಿತರಿದ್ದರು.



0/Post a Comment/Comments