ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ - Bailhongal


ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಭೀಕರ ಹಲ್ಲೆ

ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಇಲ್ಲಿಯ ಕೋರ್ಟ್ ಆವರಣದಲ್ಲೇ ಮಾಜಿ ಸೈನಿಕನೊಬ್ಬ ಪತ್ನಿಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ.
ತಾಲೂಕಿನ   ನನಗುಂಡಿಕೊಪ್ಪ ಗ್ರಾಮದವನಾಗಿರುವ ಪತಿ, ನಿವೃತ್ತ ಸೈನಿಕ ಶಿವಪ್ಪ ನಿಂಗಪ್ಪ ಅಡಕಿ (36) ಹಾಗೂ ಪತ್ನಿ ಜಯಶ್ರೀ (30) ಮಧ್ಯೆ  ವ್ಯಾಜ್ಯವಿತ್ತು. ಬುಧವಾರ ಅದರ ವಿಚಾರಣೆಯು ಬೈಲಹೊಂಗಲ   ಕೋರ್ಟಿನಲ್ಲಿ ನಡೆಯಬೇಕಿತ್ತು. 
ಕೋರ್ಟ ಆವರಣಕ್ಕೆ ಪತ್ನಿ ಬಂದಿದ್ದನ್ನು ಗಮನಿಸಿದ ಪತಿ, ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದನು. ತಲೆ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ ಎಂದು ವರದಿಯೊಂದು ತಿಳಿಸಿದೆ.
ಹುಬ್ಬಳ್ಳಿ ತಾಲೂಕು ವರೂರದಲ್ಲಿ ಒಬ್ಬ ಪುತ್ರಿ ಹಾಗೂ ತಾಯಿ ಜೊತೆ ಪತ್ನಿ ಜಯಶ್ರೀ ವಾಸವಾಗಿದ್ದರು ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಹಲ್ಲೆ ಮಾಡಿದ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಡಿವೈಎಸ್‍ಪಿ ಶಿವಾನಂದ ಕಟಗಿ ಭೇಟಿ ನೀಡಿದ್ದರು.


0/Post a Comment/Comments