ಸೇವಾನಿವೃತ್ತಿ ಹೊಂದಿದ ಪ್ರಧಾನಗುರುವಿಗೆ ಗೌರವದ ಹೂಮಳೆ - Bagewadi


ವಿದ್ಯಾರ್ಥಿ ಜೀವನ ಸಾಧನೆಯೇ ಗುರುವಿಗೆ ಪ್ರಶಸ್ತಿ
ಪ್ರೆಸ್‍ಕ್ಲಬ್ ವಾರ್ತೆ
ಹಿರೇಬಾಗೇವಾಡಿ: ವಿದ್ಯಾರ್ಥಿ ಬದುಕಿನಲ್ಲಿ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಮಾಡಿದರೆ ಅದುವೇ ಗುರುವಿಗೆ ಪ್ರಶಸ್ತಿ ಇದ್ದಂತೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ ಅಭಿಪ್ರಾಯಪಟ್ಟರು.
ಇಲ್ಲಿಯ ಶಿವಾಲಯದ ಸಭಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕøತ ಹಾಗೂ ಸೇವಾ ನಿವೃತ್ತಿ ಹೊಂದಿದ ಪ್ರಧಾನ ಗುರು ಶಶಿಧರ ರೊಟ್ಟಿ  ಅವರ  ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಗ್ಧ ಮಗುವಿನಲ್ಲಿ ಅಕ್ಷರದ ಬೀಜ ಬಿತ್ತಿ ಉತ್ತಮ ನಾಗರಿಕನಾಗಿ ರೂಪಿಸುವ ಪವಿತ್ರ ಕಾರ್ಯ ಶಿಕ್ಷಕನದ್ದಾಗಿದೆ. ಹೀಗಾಗಿ ಶಿಕ್ಷಕರ ವೃತ್ತಿ ಸರ್ವಶೇಷ್ಠವಾಗಿದೆ ಎಂದು ಬಣ್ಣಿಸಿದರು.


ಶಶಿಧರ ರೊಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಅದು ಹೆಮ್ಮೆಯ ವಿಷಯವಾಗಿದೆ ಎಂದರು.
ಬಡೆಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅರಳಿಕಟ್ಟಿ ತೋಂಟದಾರ್ಯ ವಿರಕ್ತ ಮಠದ ಶಿವಮೂರ್ತಿ ದೇವರು, ಜಾಲಿ ಕರೆಮ್ಮದೇವಿ ಮಂದಿರದ ಉಳವಪ್ಪಜ್ಜ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಶಶಿಧರ ರೊಟ್ಟಿ ಮತ್ತು ಸುಶೀಲಾ ರೊಟ್ಟಿ ದಂಪತಿಯನ್ನು ಶ್ರೀಗಳು. ವಿವಿಧ ಸಂಘಸಂಸ್ಥೆ ಪದಾಧಿಕಾರಿಗಳು, ಶಿಕ್ಷಕರು ಸತ್ಕರಿಸಿ, ಶುಭಕೋರಿದರು.
ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಹೇಮಾ ಅಂಗಡಿ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕøತ ಶಿಕ್ಷಕರನ್ನು ಹಾಗೂ ರೊಟ್ಟಿಯವರಿಗೆ ಕಲಿಸಿದ ಶಿಕ್ಷಕರನ್ನು   ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.


ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸ್ವಾತಿ ಅಡವೇಶ ಇಟಗಿ, ಉಪಾಧ್ಯಕ್ಷೆ ನಾಜರೀನ್‍ಬಾನು ಕರಿದಾವಲ, ಸದಸ್ಯರಾದ ಈರಣ್ಣ ಅರಳೀಕಟ್ಟಿ, ಸುರೇಶ ಇಟಗಿ, ಕಲ್ಲಯ್ಯಸ್ವಾಮಿ ಉದೇಶಿಮಠ, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಸಿ. ಸಿ. ಪಾಟೀಲ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಬಿ. ಎನ್. ಪಾಟೀಲ, ಉಳವಪ್ಪ ರೊಟ್ಟಿ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಬೈಲಹೊಂಗಲ ತಾಲೂಕಿನ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಜಿಲ್ಲಾ ಪ್ರಾಥಮಿಕ ಶಾಲಾ ಪ್ರಧಾನಗುರು, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ, ಬೈಲಹೊಂಗಲ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ವಿ. ಬಾನಿ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ. ಎಫ್. ಸಿದ್ದನಗೌಡರ, ನಿವೃತ್ತ ಶಿಕ್ಷಕರಾದ ವಿ. ಜಿ. ನೀರಲಗಿಮಠ,   ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶೇಖರ ಹಲಸಗಿ, ನೌಕರರ ಸಂಘದ ಪ್ರತಿನಿಧಿ ಆಸೀಫ್ ಅತ್ತಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಬಿ. ಎಲ್. ಹೆಗಡೆ ಪ್ರಾರ್ಥಿಸಿದರು. ಸಿಆರ್‍ಪಿ ಶಿವಾನಂದ ಹಿತ್ತಲಮನಿ ಸ್ವಾಗತಿಸಿದರು. ಪ್ರಧಾನಗುರು ಡಿ. ಎಸ್. ಪೂಜಾರಿ ಪರಿಚಯಿಸಿದರು. ಶಿಕ್ಷಕ ಎ. ಈ. ಮುಲ್ಲಾ ನಿರೂಪಿಸಿದರು.
ಎಸ್. ವೈ. ಗುಂಡ್ಲೂರ, ಆನಂದಗೌಡ ಕಾದ್ರೋಳ್ಳಿ, ಗಾಣಗಿ, ಜಕಾತಿ, ಪಾಶ್ಚಾಪುರ ಗುರುಗಳು ಸೇರಿದಂತೆ ಹಿರೇಬಾಗೇವಾಡಿ ಸುತ್ತ ಮುತ್ತಲಿನ  ಗ್ರಾಮಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಗ್ರಾಮಸ್ಥರು ಇದ್ದರು.

0/Post a Comment/Comments