ಬುಡರಕಟ್ಟಿ: ಸೆ.30 ರಂದು ಪ್ರತಿಭಟನೆ - Dodawad

MLA Mahantesh Doddagoudar inaugurated : Blood donation camp - click...


 ಬುಡರಕಟ್ಟಿ: ಸೆ.30 ರಂದು ಪ್ರತಿಭಟನೆ 

ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಸಮೀಪದ ಬುಡರಕಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರ ಮತು ಅಕ್ರಮದ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೆ. 30 ರಂದು ಬೆಳಿಗ್ಗೆ 9 ಗಂಟೆಗೆ ಪಂಚಾಯ್ತಿ ಎದುರು ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. 


2019-20 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳನ್ನು ಪುನಃ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಮಂಜೂರಾದ ಪರಿಹಾರ ಧನ ವಿತರಣೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಎಸಗಿದ್ದಾರೆ ಎಂದು ಗೆಳೆಯರ ಬಳಗದ  ಶಶಿಕುಮಾರ ಪಾಟೀಲ, ಸಿದ್ದಾರೂಢ ಹೊಂಡಪ್ಪನವರ ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

0/Post a Comment/Comments