‘ವಾಯಿಸ್ ಆಫ್ ಮಲ್ಲಮ್ಮನ ಬೆಳವಡಿ’ ಗ್ರ್ಯಾಂಡ್ ಫಿನಾಲೆ ಸೆ. 26ಕ್ಕೆ - belavadi


 ರಾಜ್ಯದೆಲ್ಲೆಡೆ ಸಂಗೊಳ್ಳಿ ರಾಯಣ್ಣ ಸಂಘಟನೆ ವಿಸ್ತರಣೆಗೆ ತೀರ್ಮಾನ- click...

‘ವಾಯಿಸ್ ಆಫ್ ಮಲ್ಲಮ್ಮನ ಬೆಳವಡಿ’ ಗ್ರ್ಯಾಂಡ್ ಫಿನಾಲೆ ಸೆ. 26ಕ್ಕೆ

ಪ್ರೆಸ್‍ಕ್ಲಬ್ ವಾರ್ತೆ

ಮಲ್ಲಮ್ಮನ ಬೆಳವಡಿ: ಇಲ್ಲಿಯ ಶಾರದಾ ಸಂಗೀತ ಪಾಠಶಾಲೆ ಹಾಗೂ ಭವಾನಿ ಮೆಲೋಡಿಸ್ ಜಂಟಿ ಆಶ್ರಯದಲ್ಲಿ ಉತ್ತರ ಕರ್ನಾಟಕ ಕಲಾವಿದರ ಪ್ರತಿಭೋತ್ಸವ-21 ಮತ್ತು ವಾಯಿಸ್ ಆಫ್ ಮಲ್ಲಮ್ಮನ ಬೆಳವಡಿ ಸಂಗೀತ ಗಾಯನ ಸ್ಪರ್ಧೆಯ ‘ಗ್ರ್ಯಾಂಡ್ ಫಿನಾಲೆ'ಯನ್ನು ಸೆ. 26 ರಂದು ಸಂಜೆ 5ಕ್ಕೆ ವೀರರಾಣಿ ಮಲ್ಲಮ್ಮ ಶ್ರೇಷ್ಠ ಭವನದಲ್ಲಿ ಆಯೋಜಿಸಲಾಗಿದೆ.

ಬೆಳವಡಿ ಸಂಸ್ಥಾನ ರಾಜಗುರು ಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮೀಜಿ, ನಯಾನಗರ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ, ಬೈಲಹೊಂಗಲ ಆರಾದ್ರಿಮಠದ ಮಹಾಂತಯ್ಯ ಸ್ವಾಮೀಜಿ, ಬೆಳವಡಿ ವಿರಕ್ತಮಠದ ಬಸಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. 

ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಫಿನಾಲೆಗೆ ಚಾಲನೆಗೆ ನೀಡುವರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸುವರು. ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಈರಣ್ಣ ಕರೀಕಟ್ಟಿ, ರೋಹಿಣಿ ಪಾಟೀಲ, ಶಂಕರ ಮಾಡಲಗಿ,    ಗಣ್ಯರಾದ ಡಾ.ಆರ್.ಬಿ.ಪಾಟೀಲ, ಹಬೀಬ ಶಿಲೇದಾರ, ವಿಶ್ವಾಸ ವೈದ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕುರಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಉಪಾಧ್ಯಕ್ಷ ಮಹಾಬಳೇಶ್ವರ ಕುಡಸೋಮಣ್ಣವರ ಅತಿಥಿಗಳಾಗಿದ್ದಾರೆ. ಅಂತರಾಷ್ಟ್ರೀಯ ಚಿತ್ರ ಕಲಾವಿದ ಸಿದ್ದು ಇಟಗಿ, ನೃತ್ಯ ನಿದೇಶಕ ಮಾಸ್ಟರ್ ವಿನೋದ, ಜೀ ಕನ್ನಡ ವಾಹಿನಿ ಕಲಾವಿದೆ ಪ್ರಣತಿ ಮತ್ತು ಬೆಳವಡಿ ಶಾರದಾ ಸಂಗೀತ ಪಾಠಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.


0/Post a Comment/Comments