ಧಾರವಾಡದ ಲೋಕೋಪಯೋಗಿ ಇಲಾಖೆ ಕಚೇರಿ‌ ಜಪ್ತಿ-Dharwad

 

*ಧಾರವಾಡ ಬ್ರೇಕಿಂಗ್ :* 

ರೈತರಿಗೆ ಪರಿಹಾರ ನೀಡದ ಹಿನ್ನೆಲೆ,

ಧಾರವಾಡದ ಲೋಕೋಪಯೋಗಿ ಇಲಾಖೆ ಕಚೇರಿ‌ ಜಪ್ತಿ,

ಕೆಸಿಡಿ ವೃತ್ತದ ಬಳಿ ಇರುವ ಲೋಕೋಪಯೋಗಿ ಕಚೇರಿ,

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಡೆದ ಜಪ್ತಿ,

*ಜಪ್ತಿ ವೇಳೆ ಕುರ್ಚಿ ಬಿಟ್ಟು ಏಳದ ಅಧಿಕಾರಿ*

*ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಚೌಡಣ್ಣವರ ಮೊಂಡುವಾದ*

ಕೋರ್ಟ್ ಸಿಬ್ಬಂದಿ ಜಪ್ತಿ ಮಾಡದಂತೆ ಕುರ್ಚಿ ಹಿಡಿದು ಕುಳಿತ ಅಧಿಕಾರಿ,

ಕೊನೆಗೆ ಅಧಿಕಾರಿ ಸಮೇತ ಕುರ್ಚಿ ಎಳೆದ ರೈತ ಮತ್ತು ಸಿಬ್ಬಂದಿ,

ಕೆಐಡಿಸಿಎಲ್‌ನಿಂದ ರಸ್ತೆಗಾಗಿ ನಡೆದಿದ್ದ ಭೂ ಸ್ವಾಧೀನ

 *ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ರೈತರ ಜಮೀನು* 

19 ಜನ ರೈತರ 3 ಎಕರೆ ಜಮೀನಿಗೆ ಸಂಬಂಧಿಸಿದ ಪರಿಹಾರ,

2012ರಲ್ಲಿ ನಡೆದಿದ್ದ ಸ್ವಾಧೀನ,

ಪರಿಹಾರ ನೀಡದ ಹಿನ್ನೆಲೆ ಕೋರ್ಟ್‌ಗೆ ಮೊರೆ ಹೋಗಿದ್ದ ರೈತರು,

ಒಟ್ಟು 67 ಲಕ್ಷ ಪರಿಹಾರ ನೀಡುವಂತೆ 2017ರಲ್ಲಿ ಕೋರ್ಟ್ ಆದೇಶ,

ಕುಂದಗೋಳದ ಹಿರಿಯ ದಿವಾಣಿ ನ್ಯಾಯಾಲಯದ ಆದೇಶ,

ಆದರೂ ಪರಿಹಾರ ನೀಡದೆ ವಿಳಂಬ,

ನ್ಯಾಯಾಲಯ ಆದೇಶ ಹಿನ್ನೆಲೆ ಜಪ್ತಿಗೆ ಬಂದಿದ್ದ ಸಿಬ್ಬಂದಿ,

ಜಪ್ತಿ ವೇಳೆ ಅಧಿಕಾರಿ ಚೌಡಣ್ಣವರ ಹೈ ಡ್ರಾಮಾ




0/Post a Comment/Comments